Bengaluru

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ- ಸಿಪಿಎಂ

ಬೆಂಗಳೂರು, ಅ 23 – ಇದೇ 28 ರಂದು ನಡೆಯಲಿರುವ ಶಿಕ್ಷಕರ ಹಾಗೂ ಪದವೀದರ ವಿಭಾಗಗಳ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮಾಕ್ಸ೯ವಾದಿ ಕಮ್ಯುನಿಸ್ಟ ಪಕ್ಷ ಕರೆ ನೀಡಿದೆ.

ದೇಶದ ಹಾಗೂ ರಾಜ್ಯದ ದುಸ್ಥಿತಿಗೆ ಕಾರಣವಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡನ್ನು ನಿರ್ಣಾಯಕವಾಗಿ ಸೋಲಿಸಿ ಆ ಪಕ್ಷಗಳಿಗೆ ಸರಿಯಾದ ಪಾಠ ಕಲಿಸುವಂತೆ ಸಿಪಿಎಂ ಕಾರ್ಯದರ್ಶಿ ಯು. ಬಸವರಾಜು ಮನವಿ ಮಾಡಿದ್ದಾರೆ.

ಪಶ್ಚಿಮ ಪದವೀದರ ಕ್ಷೇತ್ರ ಹೊರತು ಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸುವಂತೆ ಸಿಪಿಐಎಂ ಮನವಿ ಮಾಡಿದೆ.

ಕಳೆದ ಎರಡು ವಾರಗಳಿಂದ ರಾಜ್ಯದಾದ್ಯಂತ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಅಪಾರ ಹಾನಿಯಾಗಿದೆ. ಮನೆಗಳು ಬಿದ್ದು ಹೋಗಿವೆ. ಬೆಳೆಗಳು ಹಾಳಾಗಿವೆ. ಕೈಗೆ ಬಂದ ಬೆಳೆಗಳು ಮನೆಗೆ ತರಲಾಗದೇ ಕಣದಲ್ಲಿಯೇ ಮೊಳೆತು ಹೋಗಿವೆ. ಪ್ರವಾಹದಿಂದಾಗಿ ಜಮೀನುಗಳು ಹಲವೆಡೆ ಕೊಚ್ಚಿ ಹೋಗಿವೆ. ಪಂಪ್ ಸೆಟ್ ಗಳು ಹಾನಿಗೀಡಾಗಿವೆ. ಜನತೆ ತೀವ್ರತೆರನಾದ ಕೋವಿಡ್ ಸಂಕಷ್ಠ ದಲ್ಲಿರುವಾಗಲೇ ಈ ಅತಿವೃಷ್ಠಿ ಯು ಮೇಲಿಂದ ಮೇಲೆ ದಾಳಿಯನ್ನು ನಡೆಸಿದೆ. ಆದರೆ ಆಳುವ ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿವೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಳೆದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಗಂಭೀರ ಖಾಳಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದು ತೀವ್ರ ಖಂಡನೀಯ. ಈಗಲಾದರೂ, ಜನತೆಯ ಜೊತೆ ನಿಲ್ಲಬೇಕು. ಬೆಳೆ, ಆಸ್ತಿಪಾಸ್ತಿ ನಷ್ಟದ ಬಗ್ಗೆ ತ್ವರಿತವಾಗಿ ಸಮೀಕ್ಷೆ ನಡೆಸಿ ಅಗತ್ಯ ನೆರವನ್ನು ಘೋಷಿಸ ಬೇಕು. ಹಳೆಯ ಕಾಲ ಬಾಧಿತ ಪರಿಹಾರದ ನಿಯಮಗಳನ್ನು ಬದಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮನೆಕಳೆದುಕೊಂಡು ನಿರಾಶ್ರಿತರಾದವರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲು, ಕೊರಕಲು ಬಿದ್ದ ಜಮೀನುಗಳಿಗೆ, ಹಾನಿಗೀಡಾದ ಪಂಪ್ ಸೆಟ್ ಗಳಿಗೆ, ಬೆಳೆನಷ್ಠಕ್ಕೆ ವಿಮೆ ಸೇರಿದಂತೆ ಎಲ್ಲಾ ರೀತಿಯ ಪರಿಹಾರಗಳನ್ನು ಒದಗಿಸಬೇಕು. ರಾಜ್ಯದಾದ್ಯಂತ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಮಾಸಿಕ 7,500 ರೂ ಹಾಗು ತಲಾ ವ್ಯಕ್ತಿಗೆ ಮಾಸಿಕ 15 ಕೆ.ಜಿ. ಆಹಾರಧಾನ್ಯ ಮತ್ತು ಪಟ್ಟಣ ಪ್ರದೇಶವೂ ಸೇರಿದಂತೆ ಎಲ್ಲೆಡೆ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ಏರಿಕೆ ಮಾಡಬೇಕು. ಕನಿಷ್ಟ ವೇತನವನ್ನು 750 ರೂಗಳಿಗೆ ಹೆಚ್ಚಿಸಬೇಕು. ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಮತ್ತು ಬೆಳೆ ಸಾಲ ಮನ್ನಾ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಸಿಪಿಐ(ಎಂ) ಕಾರ್ಯದರ್ಶಿ ಯು. ಬಸವರಾಜ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!