Vijayapur

900 ವರ್ಷಗಳ ನಂತರವೂ ಬಸವಣ್ಣ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಇಲ್ಲದಿರುವುದು ಆಘಾತಕರ

ವಿಜಯಪುರ,ಅ 23- ಜಗತ್ತಿಗೆ ಸರ್ವಸಮಾನತೆಯನ್ನು ಬೋಧಿಸಿದ್ದಲ್ಲದೇ,ಆಚರಣೆಗೆ ತಂದ ಮಹಾ ನ್ ದಾರ್ಶನಿಕ ಬಸವಣ್ಣನವರ ಹೆಸರಿನಲ್ಲಿ 900ವರ್ಷಗಳ ನಂತರವೂ ಒಂದೇ ಒಂದು ವಿಶ್ವವಿದ್ಯಾಲಯ ಇಲ್ಲ ದಿರುವದು ಆಘಾತಕಾರಿ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಎಲ್ ಡಿಇ ಸಂಸ್ಥೆಯ 111ನೇ ಸಂಸ್ಥಾಪನ ದಿನಾಚರಣೆ ನಿಮಿತ್ತ ನಡೆದ ಆನ್ ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶರಣ ಸಂಸ್ಕೃತಿಯ ಮೂಲಕ ಕಾಯಕ,ದಾಸೋಹ,ಸಮಾನತೆ, ಆತ್ಮಗೌರವದಂತಹ ಅದ್ಭುತ ಸಂದೇಶಗಳನ್ನು ನೀಡಿದ ಬಸವಣ್ಣನವರ ಹೆಸರಿನಲ್ಲಿ ಇದುವರೆಗೂ ನಾವು ಅವರ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯಕ್ಕೆ ಸ್ಥಾಪಿಸಿಲ್ಲ ಎಂದರು.

ಆಲಮೇಲ ದೇಶಮುಖರು, ಹಲಗಲಿ ಸರನಾಯಕರು,ರಕ್ಕಸಗಿ,ಸೊನ್ನ ದೇಸಾಯಿಯವರು ಮತ್ತಿತರ ಗಣ್ಯರ ಸಹ ಕಾರದಿಂದ ಬಿಎಲ್ ಡಿಇ ಸಂಸ್ಥೆಯನ್ನು ಹುಟ್ಟು ಹಾಕಿದ ಹಳಕಟ್ಟಿಯವರು 12ನೇ ಶತಮಾನದ ವಚನ ಸಾಹಿತ್ಯ ವನ್ನು ಜಗತ್ತಿಗೆ ಪಸರಿಸಲು ಕಾರಣವಾದವರು.ಒಂದು ವೇಳೆ ಫ.ಗು.ಹಳಕಟ್ಟಿಯವರು ತಾಡೋಲೆಗಳಲ್ಲಿದ್ದ ವಚನ ಸಾಹಿತ್ಯವನ್ನು ಹೆಕ್ಕಿ,ಪ್ರಕಟಿಸಿ ಜಗತ್ತಿಗೆ ಪರಿಚಯಿಸದೇ ಹೋಗಿದ್ದರೆ,ಬಸವಣ್ಣ ಹಾಗೂ ಶರಣ ಸಾಹಿತ್ಯ ಹೊರ ಜಗತ್ತಿಗೆ ತಿಳಿಯದೇ ಹೋಗುತ್ತಿತ್ತು ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!