Bengaluru

ಬ್ಯಾಂಕರ್‌ಗಳೊಂದಿಗೆ ಸದಾನಂದ ಗೌಡ ಸಭೆ: ಆದ್ಯತಾ ವಲಯ ಸಾಲಯೋಜನೆ ತ್ವರಿತ ಮಂಜೂರಿಗೆ ಸೂಚನೆ

ಬೆಂಗಳೂರು, ಅ 22- ಸಣ್ಣ ಕೈಗಾರಿಕೆ, ಕೃಷಿ, ಶಿಕ್ಷಣ, ವಸತಿ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಮುಂತಾದ ಆಧ್ಯತಾ ವಲಯದ ಯೋಜನೆಗಳಿಗೆ ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಗಿರುವ ಕೆನರಾ ಬ್ಯಾಂಕಿನ ಉಸ್ತುವಾರಿಯಲ್ಲಿಂದು ನಡೆದ ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಕಿಸಾನ್‌ ಸಮ್ಮಾನ್‌ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ಸೌಲಭ್ಯಗಳು ನೇರ ವರ್ಗಾವಣೆ ಮೂಲಕ ನಡೆಯತ್ತದೆ. ಯಾರೊಬ್ಬರೂ ವಿಶೇಷವಾಗಿ ರೈತರು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ (ಹೊರವಲಯದಲ್ಲಿ) ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬಗಳ ಸಮೀಕ್ಷೆ ನಡೆಸಿ ಪ್ರತಿಯೊಂದು ಕುಟುಂಬಕ್ಕೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಅನುಸೂಚಿತ ಜಾತಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಾಲ್ಮಿಕಿ ನಿಗಮ ಇವೇ ಮುಂತಾದ ನಿಗಮ-ಮಂಡಳಿಗಳು, ಪ್ರಾಯೋಜಿಸುವ ಅನೇಕ ಸಾಲಯೋಜನೆಗಳ ಬಹುತೇಕ ಅರ್ಜಿಗಳು ಹಾಗೂ ಬಿಬಿಎಂಪಿ ಶಿಪಾರಸು ಮಾಡಿರುವ ಬೀದಿಬದಿ ವ್ಯಾಪಾರಿಗಳ ಕಿರುಸಾಲದ ಅರ್ಜಿಗಳು ಅನೇಕ ತಿಂಗಳುಗಳಿಂದ ಬಾಕಿಯುರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಅರ್ಜಿಗಳಿಗೆ ಮಂಜೂರಾತಿ ನೀಡುವಲ್ಲಿ ಅನಗತ್ಯ ಹಾಗೂ ಸಕಾರಣವಿಲ್ಲದೆ ವಿಳಂಬ ಮಾಡುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಸಚಿವರು ಅರ್ಜಿಗಳು ಸಾಲಕ್ಕೆ ಅರ್ಹವಾಗಿಲ್ಲದಿದ್ದರೆ ಅಂತ ಅರ್ಜಿಗಳನ್ನು ಸಕಾರಣ ಕೊಟ್ಟು ತಿರಸ್ಕರಿಸಬೇಕು. ಅರ್ಜಿಗಳನ್ನು ತಿಂಗಾಳುಗಟ್ಟಲೆ ಬಾಕಿ ಇಟ್ಟುಕೊಳ್ಳಬೇಡಿ. ಮುಂದಿನ ೧೫ ದಿನಗಳಲ್ಲಿ ತಮಗೆ ಅನುಸರಣಾ ವರದಿ ಸಲ್ಲಿಸಿ ಎಂದು ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!