Patna

ಚುನಾವಣಾ ಪ್ರಚಾರ ಸಭೆಯಲ್ಲಿ ಲಾಲೂ ಪರ ಘೋಷಣೆ.. ಸಿಟ್ಟಿಗೆದ್ದ ನಿತೀಶ

ಪಾಟ್ನಾ, ಅ 21- ಬಿಹಾರ ಮುಖ್ಯಮಂತ್ರಿ ಸಂಯುಕ್ತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ನಿತೀಶ ಕುಮಾರ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮ ಸಹನೆ ಕಳೆದುಕೊಂಡ ಘಟನೆ ನಡೆಯಿತು.

ವೇದಿಕೆ ಮೇಲೆ ನಿತೀಶ ಕುಮಾರ ಮಾತನಾಡುತ್ತಿದ್ದಾಗ, ಲಾಲೂ ಪ್ರಸಾದ ಯಾದವ ಜಿಂದಾಬಾದ ಎಂದು ಕೆಲವು ವ್ಯಕ್ತಿಗಳು ಘೋಷಣೆ ಕೂಗಿದರು.
ಇದರಿಂದ ಕೆಂಡಾಮಂಡರಾದ ನಿತೀಶ ಕುಮಾರ, ‘ನ್ಯೂಸೆನ್ಸ್’ ಮಾಡುವುದು ಬೇಡ ಎಂದು ವೇದಿಕೆಯಿಂದಲೇ ಘೋಷಣೆ ಕೂಗುತ್ತಿದ್ದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷಕ್ಕೆ ನೀವು ಮತ ಹಾಕಬಾರದು ಎಂದುಕೊಂಡಿದ್ದರೆ, ನಿಮ್ಮ ಮತ ನಮಗೆ ಹಾಕಬೇಡಿ, ಆದರೆ ಸಭೆಯಲ್ಲಿ ನ್ಯೂಸೆನ್ಸ್ ಸೃಷ್ಟಿಸುವುದು ಬೇಡ ಎಂದು ನಿತೀಶ ಖಾರವಾಗಿ ನುಡಿದರು. ಇದೇ ಸಮಯದಲ್ಲಿ ಘೋಷಣೆ ಕೂಗುತ್ತಿರುವ ವ್ಯಕ್ತಿಗಳು ಮಾಡುತ್ತಿರುವ ಕೆಲಸ ಸರಿಯೇ… ಎಂದು ಸಭೆಯಲ್ಲಿದ್ದ ಜನರನ್ನು ನಿತೀಶ ಜೋರಾಗಿ ಪ್ರಶ್ನಿಸಿದರು. “ನೋ” ಎಂದು ಜನರು ಪ್ರತಿಯಾಗಿ ಸ್ಪಂದಿಸಿದರು.

ಲಾಲೂ ಪ್ರಸಾದ ಯಾದವ ಪುತ್ರ ತೇಜ ಪ್ರತಾಪ ಯಾದವ ಗೆ ಒಂದು ಕಾಲದ ಹೆಣ್ಣು ಕೊಟ್ಟ ಮಾವನಾಗಿರುವ ಚಂದ್ರಿಕಾ ರಾಯ್ ಗೆ ಜೆಡಿ(ಯು) ಪಕ್ಷ ಇಲ್ಲಿ ಟಿಕೆಟ್ ನೀಡಿದೆ. ಚಂದ್ರಿಕಾ ರಾಯ್ ಗೆ ಮತ ನೀಡಬೇಕೆಂದು ನಿತೀಶ್ ಕುಮಾರ್ ವೇದಿಕೆಯ ಮೇಲಿಂದ ಮತದಾರರನ್ನು ಮನವಿ ಮಾಡುತ್ತಿದ್ದಾಗ, ಕೆಲವು ವ್ಯಕ್ತಿಗಳು ಘೋಷಣೆ ಕೂಗುವ ಮೂಲಕ ಗದ್ದಲ, ಕೋಲಾಹಲ ಸೃಷ್ಟಿಸಿದರು. ಅವರನ್ನು ಸುಮ್ಮನಿರುವಂತೆ ನಿತೀಶ್ ಮನವಿ ಮಾಡಿಕೊಂಡ ಕೂಡಲೇ, ಕೆಲವರು ಆ ಗುಂಪನ್ನು ಸುತ್ತುವರಿದು ಅಲ್ಲಿಂದ ಹೊರಗೆ ಕಳುಹಿಸಿದರು.

ಈ ಘಟನೆಯ ಬಗ್ಗೆ ಆರ್ ಜೆ ಡಿ ನಾಯಕ ಮೃತ್ಯುಂಜಯ ತಿವಾರಿ ಮಾತನಾಡಿ, ಲಾಲೂ ಒಬ್ಬ ಅದ್ಬುತವಾದ, ಬಿಹಾರ ಜನರ ಪ್ರೀತಿಯನ್ನುಒಂದಿರುವ ವ್ಯಕ್ತಿ ಎಂದು ಹೇಳಿದರು. ಬಿಹಾರದ ಜನರನ್ನು ನಿತೀಶ ಕುಮಾರ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!