Vijayapur

ಅರಣ್ಯ ಇಲಾಖೆ ದಾಳಿ; ಹುಲಿಯ ಚರ್ಮ, ಉಗುರು ವಶ

ವಿಜಯಪುರ, ಅ 21- ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿಯು ದಾಳಿ ನಡೆಸಿ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಹುಲಿ ಮತ್ತು ಸಾಂಬಾರ್ ಜಿಂಕೆಯ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.

ವನ್ಯಪ್ರಾಣಿಗಳನ್ನು ಭೇಟೆಯಾಡಿದ ಕುರಿತು ಮಾಹಿತಿ ದೊರೆತ ಅಧಿಕಾರಿಗಳು, ಹಿರೇಮಠ‌ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಹುಲಿ, ಜಿಂಕೆಯ ಚರ್ಮ ಮತ್ತು ಹುಲಿಯ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ವನ್ಯಪ್ರಾಣಿಗಳ ಬೇಟೆಗಾರರನ್ನು ಬಂಧಿಸಲಾಗಿದೆ. ಈ ಆರೋಪಕ್ಕೆ ವನ್ಯಜೀವಿ ಕಾಯ್ದೆಯಡಿ ಏಳು ವರ್ಷಗಳ ಸೆರೆವಾಸ ವಿಧಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!