Bengaluru

ಯಡಿಯೂರಪ್ಪ ಕೆಳಗಿಳಿಸಲು ಬಿಜೆಪಿಯ ಮೀರ ಸಾದಿಕರು ಕೆಲಸ ಮಾಡ್ತಿದ್ದಾರೆ: ಡಿ.ಕೆ.ಸುರೇಶ

ಬೆಂಗಳೂರು, ಅ 20- ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸಲು ಯಾವೆಲ್ಲ ಮೀರ ಸಾದಿಕರು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಹೇಳಿದವರು ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಸಂಸದ ಡಿ.ಕೆ.ಸುರೇಶ ತಿರುಗೇಟು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರನ್ನು ಮೀರ್ ಸಾದಿಕ್ ಗೆ ಹೋಲಿಸಿ ಟೀಕಿಸಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್ ಹೇಳಿಕೆಗೆ ಕಿಡಿಕಾರಿರುವ ಡಿ.ಕೆ.ಸುರೇಶ, ಅಶ್ವಥನಾರಾಯಣ ಹಾಗೂ ಮಿತ್ರಮಂಡಳಿಯ ಅಷ್ಟದಿಕ್ಪಾಲಕರು ರಾಜ್ಯದಲ್ಲಿ ಕೊರೋನಾ ಸೋಂಕಿನ ನೆಪದಲ್ಲಿ 2000 ಕೋಟಿ ಲೂಟಿ ಮಾಡಿದ್ದಾರೆ. ಯಡಿಯೂರಪ್ಪ ಅವರದ್ದು ಲೂಟಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ. ಶಿವಕುಮಾರ ಗೆ ಪ್ರಮಾಣ ಮಾಡುವಂತೆ ಕೇಳಲು ಇವರಿಗೆ ಯಾವ ಯೋಗ್ಯತೆ ಇದೆ. ಅಶ್ವಥ ನಾರಾಯಣಗೆ ಮಾನ ಮರ್ಯಾದೆ ಇದೆಯಾ?. ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಏಕವಚನದಲ್ಲಿ ಡಿ.ಕೆ.ಸುರೇಶ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಇದೆ. ರಾಜ್ಯದ ತುಂಬೆಲ್ಲಾ ಕೊರೋನಾವಿದೆ. ಪ್ರಧಾನಿ ನರೇಂದ್ರ ಮೋದಿ ಮುಂದೆ ಪರಿಹಾರ ಕೇಳುವುದಕ್ಕೆ ಈ ಸರ್ಕಾರದಲ್ಲಿ ಸಚಿವರಿಗಾಗಲೀ, ಸಂಸದರಿಗಾಗಲೀ ಒಬ್ಬರಿಗೂ ಧೈರ್ಯ ಇಲ್ಲ ಎಂದು ಟೀಕಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!