Belagavi

ಇನ್ನೂ ಎರಡು ವಾರ ಬೆಳಗಾವಿಯ ಚಿತ್ರಮಂದಿರಗಳು ತೆರೆಯೊಲ್ಲ

ಬೆಳಗಾವಿ, ೧೮- ಕೇಂದ್ರ ಸರಕಾರ ಕೋವಿಡ್-19 ಆನ್ ಲಾಕ್ 5.0 ಆಡಿ ಚಿತ್ರಮಂದಿರಗಳನ್ನು ಷರತ್ತುಬದ್ದವಾಗಿ ತೆರೆಯಲು ಅನುಮತಿ ನೀಡಿದ್ದರೂ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಚಿತ್ರಮಂದಿರಗಳು ತೆರೆಯದಿರಲು ನಿರ್ಧರಿಸಿವೆ.

ಚಿತ್ರಮಂದಿರಕ್ಕೆ ಬರಲು ಪ್ರೇಕ್ಷಕ ಹೆದರಿಕೆ, ಅವರ ನಿರುತ್ಸಾಹ, ಹೊಸ ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಮುಂದಾಗದಿರುವದು ಇದಕ್ಕೆ ಕಾರಣ.

ಈ ಕುರಿತು ಮಾತನಾಡಿರುವ ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಅವಿನಾಶ ಪೋತದಾರ, 7 ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳ ಬಾಗಿಲು ತೆರೆಯಲಿಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕಿದೆ. ಚಿತ್ರಮಂದಿರಗಳು ಓಪನ್ ಆದರೂ, ಸಂಪೂರ್ಣ ಪ್ರದರ್ಶನ ನಡೆಸಲು ಅವಕಾಶವಿಲ್ಲ. ಚಿತ್ರಮಂದಿರಗಳ ಒಟ್ಟಾರೆ ಸಾಮಥ್ರ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರವೇ ಪ್ರವೇಶ ನೀಡಬೇಕು. ಟಾಕೀಸ್‍ನ ಸೀಟುಗಳ ಸಂಖ್ಯೆ 100 ಇದ್ದರೆ, 50 ಪ್ರೇಕ್ಷಕರಿಗೆ ಮಾತ್ರವೇ ಟಿಕೆಟ್ ವಿತರಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಈ ನಿಯಮಗಳನ್ನು ಪಾಲಿಸಲು ಕಷ್ಟಸಾಧ್ಯವಾಗಿದೆ.

ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುತ್ತಾರೆಯೇ ಎನ್ನುವುದೇ ಪ್ರಶ್ನೆಯಾಗಿದೆ. ಅದೇ ರೀತಿ ಇಡೀ ಚಿತ್ರೋದ್ಯಮ ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಇಂತಹ ಸಮಯದಲ್ಲಿ ಚಿತ್ರಮಂದಿರಗಳನ್ನು ತೆರೆಯುವುದು ಸೂಕ್ತ ಅಲ್ಲ. ಇನ್ನೆರಡು ವಾರಗಳ ನಂತರ ಆರಂಭಿಸಬೇಕು ಎಂದು ಸಂಘ ನಿಧ೯ರಿಸಿದೆಯೆಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!