Mumbai

ಮಿಥುನ್ ಚಕ್ರವರ್ತಿ ಪುತ್ರನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು

ಮುಂಬೈ, ಅ 17- ಪ್ರಮುಖ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ, ನಟ ಮಹಾಕ್ಷಯ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಾಕ್ಷಯ್ ತನ್ನ ಮೇಲೆ ಅತ್ಯಾಚಾರ ಎಸಗಿ, ವಂಚಿಸಿದ್ದಾನೆ ಎಂದು ಆರೋಪಿಸಿ 38 ವರ್ಷದ ಮಹಿಳೆ ಗುರುವಾರ ರಾತ್ರಿ ಓಶಿವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ದೂರಿನ ಹಿನ್ನಲೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಓಶಿವಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಧಿತೆ ಮಹಿಳೆಯೊಂದಿಗೆ, ಮಹಾಕ್ಷಯ್ 2015 ರಿಂದ 2018 ರವರೆಗೆ ಸಂಬಂಧಹೊಂದಿದ್ದರು. ಆದರೆ ಮದುವೆಯಾಗುವುದಾಗಿ ಹೇಳಿ ತನಗೆ ವಂಚಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

2015 ರಲ್ಲಿ ಪಶ್ಚಿಮ ಅಂಧೇರಿಯಲ್ಲಿ ಮಹಾಕ್ಷಯ್ ಹೊಸದಾಗಿ ಖರೀದಿಸಿದ್ದ ಮನೆ ನೋಡಲು ತೆರಳಿದ್ದಾಗ ತಂಪು ಪಾನೀಯದಲ್ಲಿ ಮಾದಕವಸ್ತು ಬೆರೆಸಿ ತನ್ನೊಂದಿಗೆ ದೈಹಿಕ ಸಂಬಂಧ ಇರಿಸಿಕೊಳ್ಳುವಂತೆ ಒತ್ತಾಯಿಸಿದ್ದ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.

ತಾನು ಗರ್ಭಧರಿಸಿರುವ ವಿಷಯ ಆತನಿಗೆ ತಿಳಿಸಿದ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿ, ಬಲವಂತದಿಂದ ಗರ್ಭಸ್ರಾವ ಔಷಧಿ ನೀಡಿದ್ದರು ಆರೋಪಿಸಿದ್ದಾಳೆ, ತನ್ನನ್ನು ವಿವಾಹ ಮಾಡಿಕೊಳ್ಳುವಂತೆ ಬಾಧಿತೆ ಮಹಿಳೆ ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ಮಾತು ಮರೆಸಿ ಮೂರು ವರ್ಷಗಳ ಕಾಲ ವಂಚಿಸಿದ್ದಾನೆ ಆಕೆ ಹೇಳಿದ್ದಾರೆ. 2018 ರ ಜನವರಿಯಲ್ಲಿ ವಿವಾಹದ ಬಗ್ಗೆ ತೀವ್ರ ಒತ್ತಡ ಹಾಕಿದಾಗ ನಮ್ಮ ನಡುವೆ ಜಗಳ ನಡೆದಿದ್ದವು ಆಕೆ ದೂರಿನಲ್ಲಿ ವಿವರಿಸಿದ್ದಾಳೆ. ಈ ವಿಷಯದ ಬಗ್ಗೆ ಆತನ ತಾಯಿ ಯೋಗಿತಾ ಬಾಲಿ ಸಹ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. 2018 ರಲ್ಲಿ ದೆಹಲಿಯ ಬೇಗಂಪುರ ಪೊಲೀಸ್ ಠಾಣೆಗೆ ಮಹಾಕ್ಷಯ್ ಹಾಗೂ ಅತನ ತಾಯಿ ವಿರುದ್ದ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಪೊಲೀಸರು 376 (ಅತ್ಯಾಚಾರ) ಮತ್ತು 313 (ಬಲವಂತದ ಗರ್ಭಪಾತ) ಪ್ರಕರಣ ದಾಖಲಿಸಿದ್ದರು.

ಆದರೆ, ದೆಹಲಿ ಹೈಕೋರ್ಟ್ ಮಹಾಕ್ಷಯ್ ಹಾಗೂ ಅವರ ತಾಯಿಗೆ ನಿರೀಕ್ಷಣಾ ಜಾಮೀನು ನೀಡಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸಂತ್ರಸ್ತೆಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಸಂತ್ರಸ್ತೆ 2020 ರ ಜುಲೈನಲ್ಲಿ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಕೆಯ ದೂರಿನ ಅನ್ವಯ ಐಪಿಸಿ 376 (ಅತ್ಯಾಚಾರ) 376 (2) (ಎನ್) (ಬಹು ಅತ್ಯಾಚಾರಗಳು) 328 (ಗರ್ಭಪಾತ, ಚಿತ್ರಹಿಂಸೆ, ದಬ್ಬಾಳಿಕೆ) 417 (ಮೋಸ), 506 (ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾಕ್ಷಯ್ ಹಾಂಟೆಡ್ 3 ಡಿ ಹಾಗೂ ಲೂಟಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!