Belagavi

ರಾಜ್ಯೋತ್ಸವ ದಿನ “ಕಪ್ಪು ದಿನ ” ಆಚರಣೆಗೆ ಅನುಮತಿ ಕೇಳಿದ ಎಂಇಎಸ್

ಬೆಳಗಾವಿ : ಬರುವ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಪ್ರತಿಭಟಾತ್ಮಕವಾಗಿ “ಕಪ್ಪು ದಿನ” ಆಚರಣೆಗೆ ಅನುಮತಿ ಕೋರಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.

ಸಮಿತಿಯ ನಿಯೋಗವೊಂದು ದೀಪಕ ದಳವಿಯವರ ನೇತೃತ್ವದಲ್ಲಿ ಪೊಲೀಸ್ ಕಮಿಷನರ್ ತ್ಯಾಗರಾಜನ್ ಅವರಿಗೆ ಮನವಿ ಅರ್ಪಿಸಿ “ಪ್ರತಿವರುಷ ರಾಜ್ಯೋತ್ಸವದ ದಿನದಂದು ತಾವೂ ಕರಾಳ ದಿನವೆಂದು ಆಚರಿಸುತ್ತ ಬಂದಿದ್ದು ಈ ಬಾರಿಯೂ ಅವಕಾಶ ನೀಡಬೇಕು. ಕರಾಳ ದಿನಾಚರಣೆಯ ಅಂಗವಾಗಿ ದ್ವಿಚಕ್ರ ವಾಹನದ ಮೆರವಣಿಗೆ, ಬಹಿರಂಗ ಸಭೆ ಇರಲಿದೆ” ಎಂದಿದ್ದಾರೆ.

ರಾಜ್ಯೋತ್ಸವದ ಮೆರವಣಿಗೆಗೆ ಪರ್ಯಾಯವಾಗಿ ಅಂದು ಮುಂಜಾನೆ ಬೆಳಗಾವಿ ದಕ್ಷಿಣ ಭಾಗದಲ್ಲಿ ಕಪ್ಪು ಬಟ್ಟೆ ಧರಿಸಿ, ಕಪ್ಪು ಧ್ವಜದೊಂದಿಗೆ ಪ್ರತಿಭಟನಾ ಮೆರವಣಿಗೆ ಮಾಡುವದು, ಸಂಜೆ ಮಹಾರಾಷ್ಟ್ರ ಮುಖಂಡರಿಂದ ಭಾಷಣ ಮಾಡಿಸುವದು ರೂಢಿ. ಸರಕಾರ ಮೊದಲು ಅನುಮತಿ ನೀಡದೆ ಕೊನೆಗಳಿಗೆಯಲ್ಲಿ ಷರತ್ತುಬದ್ದ ಅನುಮತಿ ನೀಡುತ್ತಾ ಬಂದಿದೆ. ಆದರೆ ಸಮಿತಿ ಪ್ರತಿವರುಷವೂ ಷರತ್ತು ಉಲಂಘಿಸುತ್ತಿದ್ದು ಅದಕ್ಕೆ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವದಿಲ್ಲ.

“ಪ್ರತಿಭಟಿಸಲು ನಮಗೆ ಅನುಮತಿಯ ಅಗತ್ಯವಿಲ್ಲ. ಅನುಮತಿ ಸಿಗದೆಯಿದ್ದರೂ ಕಪ್ಪು ದಿನ ಆಚರಿಸಿಯೇ ಸಿದ್ದ” ಎಂದೂ ಸಮಿತಿ ಸರಕಾರಕ್ಕೆ ಎಚ್ಚರಿಸುತ್ತ ಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!