Dharwad

ಲಂಚ‌ ಸ್ವೀಕರಿಸುವಾಗ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಧಾರವಾಡ, ಅ.16 – ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರಕ್ಕೆ ಶಿಫಾರಸ್ಸು ಮಾಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಅಶೋಕ ಗಂಗಪ್ಪ ಕಾಶಿಬಡಿಗೇರ ಎಂಬುವವರ ಮನೆಯು ಕಳೆದ ಆಗಸ್ಟ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೀಡಾಗಿತ್ತು. ಸರ್ಕಾರ ನೀಡುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅರ್ಜಿ ಸಲ್ಲಿಸಿದ್ದರು. ಈ ಪರಿಹಾರಕ್ಕೆ ಶಿಫಾರಸು ಮಾಡಲು ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಅವರು 30,000 ರೂ. ಗಳ ಲಂಚದ ಬೇಡಿಕೆ ಇಟ್ಟಿದ್ದರು. ಕೊನೆಗೆ 20,000 ರೂ. ಲಂಚಕ್ಕೆ ಒಪ್ಪಿಕೊಂಡು ಈ ಕುರಿತು ಧಾರವಾಡ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಎಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ರಾಘವೇಂದ್ರ ಬೊಮ್ಮನಾಳ ರವರು ದೂರುದಾರರಿಂದ 20,000 ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬೆಳಗಾವಿಯ ಎಸಿಬಿ ಉತ್ತರ ವಲಯ ಪೊಲೀಸ್ಅಗಧೀಕ್ಷಕ ಬಿ ಎಸ್ ನೇಮಗೌಡ, ಮಾರ್ಗದರ್ಶನದಲ್ಲಿ, ಧಾರವಾಡದ ಎಸಿಬಿ ಪೊಲೀಸ ಉಪಾಧೀಕ್ಷಕರಾದ ಎಲ್ ವೇಣುಗೋಪಾಲ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Leave a Reply

Your email address will not be published. Required fields are marked *

Back to top button
error: Content is protected !!