Bengaluru

ಆರ್ಥಿಕ, ಸಾಮಾಜಿಕ ಜಾತಿ ಸಮೀಕ್ಷೆ ಜಾರಿಗೆ ಹಿಂದುಳಿದ ಜಾತಿ ಒಕ್ಕೂಟ ಆಗ್ರಹ

ಬೆಂಗಳೂರು, ಅ.16- ಸಿದ್ದರಾಮಯ್ಯ ಸರ್ಕಾರದ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಬೇಕೆಂದು ಮೇಲ್ಮನೆ ಕಾಂಗ್ರೆಸ್ ಸದಸ್ಯ ಹಾಗೂ ಹಿಂದುಳಿದ ಜಾತಿ ಒಕ್ಕೂಟದ ಮುಖಂಡ ಹೆಚ್.ಎಂ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಸಮೀಕ್ಷೆಯನ್ನು ಬಿಡುಗಡೆ ಮಾಡಬೇಕು. ಇಲ್ಲಿಯವರೆಗೆ ಯಾವ ರಾಜ್ಯದಲ್ಲಿಯೂ ಜನಗಣತಿ ನಡೆದಿಲ್ಲ. ಹತ್ತು ವರ್ಷಕ್ಕೊಮ್ಮೆ ಒಟ್ಟಾರೆ ಸರ್ವೆ ನಡೆಯುತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಮಾಜಿಕ,ಶೈಕ್ಷಣಿಕ ಗಣತಿ ನಡೆದಿದೆ. 63 ಕೋಟಿ ರೂಗಳನ್ನು ಇಲ್ಲಿ ಖರ್ಚು ಮಾಡಿ ಎರಡು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಸರ್ವೆ ನಡೆದಿದೆ ಎಂದರು.

ಸಿದ್ದರಾಮಯ್ಯ ಅವಧಿಯ ಕೊನೆಯಲ್ಲಿ ಇನ್ನೂ ಅಂತಿಮ ಹಂತದಲ್ಲಿತ್ತು. ತಯಾರಾದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿಲ್ಲ. ಆದರೆ ಇದೀಗ ವರದಿಯನ್ನು ಆಯೋಗ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಲ್ಲಿಸಿದೆ. ಸರ್ಕಾರ ಕೂಡಲೇ ವರದಿಯನ್ನು ಒಪ್ಪಿಕೊಳ್ಳಬೇಕು. ನಾವು ಇಲ್ಲಿ ರಾಜಕೀಯ ತರುವುದಿಲ್ಲ. ಈ ವರದಿಯನ್ನು ಸರ್ಕಾರ ಅಂಗೀಕರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಎಚ್.ಎಂ.ರೇವಣ್ಣ ಆಗ್ರಹಿಸಿದರು.

ಈ ವರದಿ ಜಾರಿಗೆ ಆಗ್ರಹಿಸಿ ಇದೇ 18 ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಮುದಾಯದ ಶ್ರೀಗಳು, ಎಲ್ಲಾ ಒಬಿಸಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜಾತಿ ಸಮೀಕ್ಷೆ ವರದಿ ಜಾರಿಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಎಂ.ಲಾತೂರ್ ಮಾತನಾಡಿ, ಮೊಟ್ಟಮೊದಲಿಗೆ ಕರ್ನಾಟಕದಲ್ಲಿ ಈ ಜಾತಿ ಸಮೀಕ್ಷೆ ನಡೆಸಲಾಗಿದೆ. ಆರ್ಥಿಕ,ಶೈಕ್ಷಣಿಕ ಉದ್ದೇಶದಿಂದ ಸಮೀಕ್ಷೆ ನಡೆದಿದೆ. ಜಾತಿ ವ್ಯವಸ್ಥೆ ಇನ್ನೂ ದೇಶದಲ್ಲಿ ಮುಂದುವರಿದಿದೆ. ಸಮಾನತೆ ಬರುವವರೆಗೆ ಜಾತಿಯತೆ ಹೋಗುವುದಿಲ್ಲ. ಮೀಸಲಾತಿ ಇದ್ದಾಗ ಮಾತ್ರ ಸಮಾನತೆ ಬರಲಿದೆ. ಅದಕ್ಕಾಗಿ ಸಮೀಕ್ಷೆಯನ್ನೇ ನಡೆಸಲಾಗಿದೆ ಎಂದರು.

ಸರ್ಕಾರ ಈ ಸಮೀಕ್ಷೆಯನ್ನು ಒಪ್ಪಿಕೊಂಡರೆ ಸಾಲದು. ವರದಿಯಂತೆ ಮೀಸಲಾತಿ ನೀಡಬೇಕು ಹಾಗಾದಾಗ ಮಾತ್ರ ಒಬಿಸಿಗಳಿಗೆ ನ್ಯಾಯಸಿಗಲಿದೆ. ರಾಜ್ಯದಲ್ಲಿ ಸಮಾನತೆ ಬರಬೇಕಾದರೆ ಮೀಸಲಾತಿ ಬರಬೇಕು. ಹಾಗಾದಾಗ ಮಾತ್ರ ಮೇಲ್ವರ್ಗದವರಂತೆ ಹಿಂದುಳಿದ ವರ್ಗದವರೆಗೂ ಸಮಾನತೆ ಸಿಗಲಿದೆ. ಇದರಿಂದ ಎಲ್ಲಾ ಹಿಂದುಳಿದ ವರ್ಗಗಳಿಗೆ ಉಪಯೋಗವಾಗಲಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 18ರಂದು ಮಹತ್ವದ ಸಭೆ ಕರೆಯಲಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಈ ಜಾತಿ ಸಮೀಕ್ಷೆಯನ್ನು ಸರ್ಕಾರ ಒಪ್ಪಬೇಕು. ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು. ಹಿಂದುಳಿದ ವರ್ಗದ ಶಾಶ್ವತ ಆಯೋಗವನ್ನು ಪ್ರಸ್ತುತ ಈಗಿನ ಸರ್ಕಾರ ವಜಾಗೊಳಿಸಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ.ಸರ್ಕಾರ ಆಯೋಗವನ್ನು ಪುನಃ ರಚಿಸಬೇಕು. ಆಯೋಗದ ಮೂಲಕ ಕೆಲಸ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!