Bengaluru

ಮಳೆಯಿಂದ 10 ಸಾವಿರಕ್ಕೂ ಹೆಚ್ಚು ಮನೆ ನೆಲಸಮ

ಬೆಂಗಳೂರು, ಅ 16 – ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಕಾರಣ ತೊಂದರೆಗೆ ಒಳಗಾದ ಜನರ ನೋವಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಕಂದಾಯ ಸಚಿವ ಅರ್ ಆಶೋಕ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ರಾಜ್ಯ ಇದನ್ನು ಕೇಂದ್ರದ ಗಮನಕ್ಕೆ ತರಲಿದೆ ಎಂದು ಹೇಳಿದರು.

ಮಳೆಯಿಂದ ಈವರೆಗೆ 10 ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದುಬಿದ್ದಿವೆ . 360 ಕೆರೆಗಳು ಒಡೆದು ಹಾನಿಯಾಗಿದೆ. ಜೊತೆಗೆ 3, 168 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಲ್ಲಾ ಡಿಸಿಗಳ ಖಾತೆಯಲ್ಲಿ ಹಣವಿದ್ದು ಪರಿಹಾರಕ್ಕೆ ಯಾವುದೆ ತೊಂದರೆಯಿಲ್ಲ ಎಂದರು.

ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದಕೊಳ್ಳಲಿದ್ದಾರೆ. ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಗತ್ಯಸೂಚನೆ ನೀಡಲಿದ್ದು ನಂತರ ತಾವು ಯಾದಗಿರಿ ಮತ್ತು ಬೆಳಗಾವಿಗೆ ಜಿಲ್ಲೆಗಳಿಗೆ ಭೇಟಿ ನೀಡುವುದಾಗಿ ಸಚಿವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!