Vijayapur

ಡೋಣಿ ನಡುಗಡ್ಡೆಯಲ್ಲಿ ಸಿಲುಕಿದ್ದ 7 ಜನರ ರಕ್ಷಣೆ

ವಿಜಯಪುರ, ಅ.16 – ಡೋಣಿ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನಡುಗಡ್ಡೆಯಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲಾಗಿದೆ.

ಡೋಣಿ ನದಿ ನಡುಗಡ್ಡೆಯಲ್ಲಿ ಇದ್ದಿಲು‌ ತಯಾರಿಸಲು ಮಹಾರಾಷ್ಟ್ರದಿಂದ ಬಂದಿದ್ದ ಐವರು ಮಕ್ಕಳು ಸೇರಿ ಏಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಡೋಣಿ ನದಿಯಲ್ಲಿ‌ ಪ್ರವಾಹ ಉಂಟಾದ ಹಿನ್ನಲೆಯಲ್ಲಿ ಈ ಕುಟುಂಬ ಅಲ್ಲಿಂದ ಸ್ಥಳಾಂತರಗೊಳ್ಳದೇ ನಡುಗಡ್ಡೆಯಲ್ಲೇ ಸಿಲುಕಿಕೊಂಡಿತ್ತು. ಗುರುವಾರ ಪ್ರವಾಹ ಇನ್ನಷ್ಟು ಹೆಚ್ಚಳಗೊಂಡ ಹಿನ್ನಲೆಯಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಹಸ್ತ ಚಾಚಿದರು.

ತಕ್ಷಣವೇ ಗುರುವಾರ ಮಧ್ಯಾಹ್ನದಿಂದಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ನಡುಗಡ್ಡೆ ಒಂದೂವರೆ ಕಿ.ಮೀ. ದುರ್ಗಮ ಪ್ರದೇಶಕ್ಕೆ ತಲುಪಿದಾಗ ರಾತ್ರಿಯಾಗಿತ್ತು. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿದ್ದ ಜಿಲ್ಲಾಡಳಿತ ಪುನಃ ಶುಕ್ರವಾರ ಬೆಳಿಗ್ಗೆ ಏಳು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.

ಸಹಾಯಕ ಅಯುಕ್ತ ಬಲರಾಮ ಲಮಾಣಿ, ಅಗ್ನಿಶಾಮಕ ದಳ‌ ಜೆ.ಬಿ.ಶೇಳಂಕರ ನೇತೃತ್ವದ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Leave a Reply

Your email address will not be published. Required fields are marked *

Back to top button
error: Content is protected !!