New Delhi

ಬಿಜೆಪಿಗೆ ‘ಲಕ್ಷ್ಮಿ ಕಟಾಕ್ಷ’….!

ನವದೆಹಲಿ, ಅ 16- ಈ ವರ್ಷ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು ಕಾರ್ಪೊರೇಟ್ ದೇಣಿಗೆ ದೊರೆತಿದೆ ಎಂದು ವರದಿಯೊಂದು ತಿಳಿಸಿದೆ.

2018-19ರ ಅವಧಿಯಲ್ಲಿ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು ವಿವಿಧ ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆಯಾಗಿ 879.10 ಕೋಟಿ ರೂ ನೀಡಿವೆ. ಈ ಪೈಕಿ 698.082 ಕೋಟಿ ರೂ ಹಣ ಬಿಜೆಪಿ ಖಾತೆಗೆ ಜಮಾ ಆಗಿದೆ ಎಂದು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ವರದಿ ಮಾಡಿದೆ.

ಒಟ್ಟು 1,573 ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಇನ್ನೂ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು , ಕಾಂಗ್ರೆಸ್ ಪಕ್ಷಕ್ಕೆ 122 ಕಾರ್ಪೋರೇಟ್‌ ಕಂಪನಿಗಳು ಕಾಂಗ್ರೆಸ್ ಪಕ್ಷಕ್ಕೆ 122.5 ಕೋಟಿ ರೂ. ದೇಣಿಗೆ ನೀಡಿವೆ. ಈ ನಡುವೆ 17 ಕಾರ್ಪೋರೇಟ್‌ ಸಂಸ್ಥೆಗಳು ಶರದ ಪವಾರ ನೇತೃತ್ವದ ಎನ್‌ಸಿಪಿಗೆ 11.35 ಕೋಟಿ ರೂ. ದೇಣಿಗೆ ನೀಡಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!