Bengaluru

ಡ್ರಗ್ಸ್ ಪ್ರಕರಣ : ನಟ ವಿವೇಕ ಒಬೇರಾಯ್ ಪತ್ನಿಗೆ ನೋಟಿಸ್

ಬೆಂಗಳೂರು, ಅ 16 – ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ವಿವೇಕ ಒಬೇರಾಯ್ ಅವರ ಪತ್ನಿ ಪ್ರಿಯಾಂಕಾಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸ್ ನೋಟಿಸ್ ನೀಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವಾ ಅವರನ್ನು ಹುಡುಕುತ್ತಿರುವ ಪೊಲೀಸರು, ಗುರುವಾರವಷ್ಟೇ ಮುಂಬೈನಲ್ಲಿರುವ ವಿವೇಕ್ ಒಬೇರಾಯ್ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದರು.

ಇದರ ಬೆನ್ನಲ್ಲೆ ವಿವೇಕ ಒಬೇರಾಯ್ ಅವರ ಪತ್ನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಆದಿತ್ಯಾ ಆಳ್ವ ಅವರು ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಸೋದರನಾಗಿದ್ದು, ಆತನ ಬಗ್ಗೆ ಪೊಲೀಸರು ಮಾಹಿತಿ ಪಡೆಯಲಿದ್ದಾರೆ.

ಆದಿತ್ಯ ಆಳ್ವಾ ಅವರು ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬೇಕಾಗಿದ್ದಾರೆ.

ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ನಿವಾಸದಲ್ಲಿ ಆದಿತ್ಯ ಆಳ್ವಾ ಅಡಗಿರಬಹುದೆಂಬ ಮಾಹಿತಿ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದು ಸಿಸಿಬಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!