Kalaburagi

ಪ್ರಧಾನಿಗೆ ಕನ್ನಡಿಗರು ಇಷ್ಟವಿಲ್ಲವಾ? ಅಥವಾ ಯಡಿಯೂರಪ್ಪ ಇಷ್ಟವಿಲ್ಲವೇ? -ಪ್ರಿಯಾಂಕ ಪ್ರಶ್ನೆ

ಕಲಬುರಗಿ, ಅ‌.16- ತಮಗೆ ಕನ್ನಡಿಗರು ಅಂದ್ರೆ ಇಷ್ಟ ಇಲ್ಲವಾ? ಅಥವಾ ನಮ್ಮ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಷ್ಟವಿಲ್ಲವಾ? ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನಿಸಿದ್ದಾರೆ.

ನೆರೆಪೀಡಿತ ಆಂಧ್ರ ಹಾಗೂ ತೆಲಂಗಾಣ‌ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರದ ಭರವಸೆ ನೀಡಿರುವುದಾಗಿ ಪ್ರಧಾನಿ ಟ್ವಿಟ್ ಮಾಡಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಖರ್ಗೆ ಅವರು ಟ್ವೀಟ್ ಮಾಡಿ, ಭಾರೀ ಮಳೆ ಹಾಗೂ ಪ್ರವಾಹದಿಂದ ಕರ್ನಾಟಕ ರಾಜ್ಯ ಸಂಕಷ್ಟದಲ್ಲಿದೆ. ಆದರೂ, ನೀವು ಪ್ರತಿ ಬಾರಿ ತಾರತಮ್ಯ ನೀತಿ ಅನುಸರಿಸುತ್ತೀರಿ ಎಂದು ಅವರು ಆರೋಪಿಸಿದ್ದಾರೆ.

ಆಂಧ್ರದ ಜಗನ್ ಹಾಗೂ ತೆಲಂಗಾಣದ ಕೆಸಿಆರ್ ಅವರಿಗೆ ಸಹಾಯ ಮಾಡುವ ನಿಮಗೆ ಕನ್ನಡಿಗರು ಹಾಗೂ ಯಡಿಯೂರಪ್ಪನವರು ಇಷ್ಟವಿಲ್ಲವೇ? ಎಂದು ಪ್ರಧಾನಿಗೆ ಪ್ರಿಯಾಂಕ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!