Mumbai

ಗಾಯಕ ಕುಮಾರ ಸಾನುಗೆ ಕೊರೋನ

ಮುಂಬೈ , ಅ 16 – ಹಿರಿಯ ಗಾಯಕ ಕುಮಾರ ಸಾನುಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ಅವರೆ ಅಧಿಕೃತ ಫೇಸ್ ಬುಕ್ ನಲ್ಲಿ ಈ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸಿದ್ದಾರೆ.

ದುರದೃಷ್ಟವಶಾತ್ ಕೊರೋನ ಸೋಂಕು ತಗಲಿದೆ. ದಯವಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ.ಧನ್ಯವಾದಗಳು ಎಂದು ಫೇಸ್ಬುಕ್ನಲ್ಲಿ ಬರೆಯಲಾಗಿದೆ.

ಕಾಮೆಂಟ್ ವಿಭಾಗದಲ್ಲಿ ಸಾನು ಅವರ ಅಭಿಮಾನಿಗಳು ಬೇಗನೆ ಚೇತರಿಸಿಕೊಳ್ಳಿ ಎಂದು ಶುಭ ಹಾರೈಸಿದ್ದಾರೆ.

ಈ ವಾರಾರಂಭದಲ್ಲಿ ಲಾಸ್ ಏಂಜಲಿಸ್ ನಲ್ಲಿರುವ ತಮ್ಮ ಕುಟುಂಬ ಭೇಟಿಯಾಗಲು ಅವರು ಅಮೆರಿಕಕ್ಕೆ ತೆರಳಬೇಕಾಗಿತ್ತು ಎಂದೂ ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!