Bengaluru

ಕೋವಿಡ್‌ ಮಾರ್ಗಸೂಚಿಗಳೊಂದಿಗೆ ಐನಾಕ್ಸ್ ಚಿತ್ರಮಂದಿರ ಸಿದ್ಧ

ಬೆಂಗಳೂರು, ಅ 15- ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಚಿತ್ರಮಂದಿರಗಳು ಈಗ ದೇಶಾದ್ಯಂತ ಮತ್ತೆ ಆರಂಭಗೊಳ್ಳಲು ಸಿದ್ಧವಾಗಿರುವಾಗ, ಐನಾಕ್ಸ್ ಥಿಯೇಟರ್‌ಗಳು ಪ್ರೇಕ್ಷಕರನ್ನು ಸ್ವಾಗತಿಸಲು ಉತ್ಸುಕವಾಗಿದೆ.

ಸರ್ಕಾರಿ ಮಾರ್ಗಸೂಚಿಗಳ ಅನುಸಾರ, ಅ.15ರಿಂದ ಐನಾಕ್ಸ್ ಚಿತ್ರಮಂದಿರ ಆರಂಭವಾಗಲಿದೆ. ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ವ್ಯವಸ್ಥೆ, ಆಸನಗಳ ನಡುವೆ ದೈಹಿಕ ಅಂತರ, ನೆಲದ ಮಾರ್ಕರ್‌ಗಳು, ಡಿಜಿಟಲ್‌ ಮಾದರಿಯ ವಹಿವಾಟು, ಪಿಪಿಇ ಕಿಟ್‌ ಲಭ್ಯತೆ, ಥರ್ಮಲ್ ಸ್ಕ್ರೀನಿಂಗ್, ಲಕ್ಷಣರಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

ಜನರು ತಮ್ಮ ಕುಟುಂಬ ಸದಸ್ಯರು, ಆಪ್ತರಿಂದ ಕೂಡ 6 ಅಡಿ ಅಂತರ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಆಸನಗಳಿಗೆ ಸೋಂಕು ನಿವಾರಕ ಸಿಂಪಡಣೆ, ಪ್ರತಿ ಪ್ರದರ್ಶನ ಮುಗಿದ ನಂತರ ಸ್ಯಾನಿಟೈಸ್‌ ಮಾಡುವುದು, ಪ್ರವೇಶ ದ್ವಾರ ಮತ್ತು ಲಾಬಿಗಳಲ್ಲಿ ಸಂಪರ್ಕರಹಿತ ಸ್ಯಾನಿಟೈಸರ್‌ ವಿತರಕ ಅಳವಡಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಡಿಜಿಟಲ್‌ ಮಾದರಿಯ ಪಾವತಿಗೆ ಹೆಚ್ಚು ಆದ್ಯತೆ ನೀಡಿರುವ ಐನಾಕ್ಸ್, ಪೇಪರ್‌ ರಸೀತಿಗಳ ವಿತರಣೆಯನ್ನು ಕೂಡ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಐನಾಕ್ಸ್ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಪ್ರತ್ಯೇಕ ಖಾಸಗಿ ಸ್ಕ್ರೀನಿಂಗ್‌ ಅನ್ನು ಕೂಡ ಆಯೋಜಿಸಿದೆ.

ಜೊತೆಗೆ, ಚಿತ್ರಮಂದಿರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಮಾರಾಟವನ್ನು ಕೂಡ ಪರಿಚಯಿಸಲಾಗುತ್ತಿದೆ ಎಂದು ಐನಾಕ್ಸ್‌ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!