Mumbai

ರಿಪಬ್ಲಿಕ್ ಟಿವಿ; 200 ಕೋಟಿ ರೂ.ಮಾನನಷ್ಟ ಮೊಕದ್ದಮೆ

ಮುಂಬೈ, ಅಕ್ಟೋಬರ್ 15- ನಟ ಸುಶಾಂತ ಸಿಂಗ್ ರಜಪೂತ್ ಪ್ರಕರಣವನ್ನು ಮುಚ್ಚಿಹಾಕುವ ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಸಂದೀಪ ಎಸ್ ಸಿಂಘ ಅವರು ರಿಪಬ್ಲಿಕ್ ಟಿವಿ ಮತ್ತು ಅದರ ‘ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ 200 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರಿಪಬ್ಲಿಕ್ ಟಿವಿಗೆ ಆರ್ಥಿಕವಾಗಿ ಲಾಭವಾಗುವುದನ್ನು ಪರಿಗಣಿಸದ ಹೊರತು, ಅರ್ನಬ್ ಅಂತಹ ಸುದ್ದಿಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾನೆ ಎಂದು ಚಾನೆಲ್‌ನ ವರದಿಗಾರರೊಬ್ಬರು ಸಿಂಘ ಅವರಿಗೆ ತಿಳಿಸಿದ್ದಾರೆ ಎಂದು ನೋಟಿಸ್ ಆರೋಪಿಸಿದೆ.

ದುರುದ್ದೇಶಪೂರಿತ ವಿಷಯವನ್ನು ಪ್ರಸಾರ ಮಾಡುವ ಏಕೈಕ ಉದ್ದೇಶವೆಂದರೆ ಹಣ ಸುಲಿಗೆ ಹಾಗೂ ಟಿಆರ್‌ಪಿ ಹಿಡಿಯುವುದು ಎಂದು ನಿರ್ಮಾಪಕನನ್ನು ಪ್ರತಿನಿಧಿಸುವ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಸಿಂಘ್ ಮತ್ತು ದಿವಂಗತ ಸುಶಾಂತ್ ಸಿಂಗ್ ರಜಪೂತ್ ತಮ್ಮ ಸಂಕಷ್ಟದ ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು ಮತ್ತು ಚಾನೆಲ್ ಸಹ ಈ ಸಂಗತಿಯನ್ನು ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಅಂತಹ ತುಣುಕನ್ನು, ಲೇಖನಗಳನ್ನು ತೆಗೆದುಹಾಕಿ ಮತ್ತು ಬೇಷರತ್ತಾದ ಕ್ಷಮೆಯಾಚನೆಯನ್ನು ಲಿಖಿತ ಅಥವಾ ವಿಡಿಯೋ ರೂಪದಲ್ಲಿ ಬಿಡುಗಡೆ ಮಾಡುವಂತೆ ನೋಟಿಸ್ ಚಾನೆಲ್ ಮತ್ತು ಗೋಸ್ವಾಮಿಗೆ ಸೂಚಿಸಲಾಗಿದ್ದು, ಇದಕ್ಕಾಗಿ 15 ದಿನಗಳ ಸಮಯವನ್ನು ನೀಡಲಾಗಿದೆ. ಇಲ್ಲವಾದಲ್ಲಿ ಈ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!