Bengaluru

ವಿವೇಕ ಓಬೆರಾಯ್ ನಿವಾಸದ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಅ.15- ಚಂದನವನದ ಮಾದಕ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಂದು ಹಿಂದಿ ಚಿತ್ರ ನಟ ವಿವೇಕ ಓಬೆರಾಯ್ ನಿವಾಸದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಕಾಟನ್ ಪೇಟೆ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದಾನೆ.

ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ ಅವರ ಪುತ್ರನಾಗಿದ್ದು, ನಟ ವಿವೇಕ ಒಬೆರಾಯ್ ಆದಿತ್ಯ ಸಹೋದರಿಯನ್ನು ವಿವಾಹವಾಗಿದ್ದಾರೆ. ಹೀಗಾಗಿ ಆದಿತ್ಯ, ವಿವೇಕ ನಿವಾಸದಲ್ಲಿ ಇರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಸಿಸಿಬಿ ಇನ್ಸ್‌ಪೆಕ್ಟರ್ ಮಹಾನಂದ್, ರವಿ ಪಾಟೀಲ್ ನೇತೃತ್ವದ ತಂಡ ಮುಂಬೈನ ಜುಹೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಬೆರಾಯ್ ನಿವಾಸದ ಮೇಲೆ ದಾಳಿ ಮಾಡಿದೆ.

ಮಾದಕ ಜಾಲದಲ್ಲಿ ರವಿಶಂಕರ ಸೆರೆಯಾಗುತ್ತಿದ್ದಂತೆ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದು, ಮುಂಬೈ ಅಥವಾ ದೆಹಲಿಯಲ್ಲಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಆರೋಪಿ ಆದಿತ್ಯ ಆಳ್ವಾ ಶೋಧದಲ್ಲಿರುವ ಸಿಸಿಬಿ ಪೊಲೀಸರ ಕಾರ್ಯಕ್ಕೆ ಮುಂಬೈನಲ್ಲಿ​ ನಟ ವಿವೇಕ ಒಬೆರಾಯ್, ಅವರ ಪತ್ನಿ ಪ್ರಿಯಾಂಕಾ ಮುಂಬೈನಲ್ಲಿ ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ.

ಆದಿತ್ಯ ಆಳ್ವಾ ಬಗ್ಗೆ ತಾವೇನು ಹೇಳುವುದಿಲ್ಲ. ನಿಮ್ಮ ತನಿಖೆ ನೀವೇ ಮಾಡಿಕೊಳ್ಳಿ ಎಂದು ಸಿಸಿಬಿ ಪೊಲೀಸರೊಂದಿಗೆ ದಂಪತಿ ವಾಗ್ವಾದಕ್ಕಿಳಿದಿದ್ದು, ನಮ್ಮ ನಿವಾಸಕ್ಕೆ ಏಕೆ ಬಂದಿದ್ದೀರಾ? ಎಂದು ತನಿಖಾ ಧಿಕಾರಿಗಳನ್ನು ಪ್ರಶ್ನಿಸಿದರು ಎನ್ನಲಾಗಿದೆ.

ಒಬೆರಾಯ್ ದಂಪತಿಯ ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲು ತನಿಖಾಧಿಕಾರಿಗಳು ಮುಂದಾಗಿದ್ದರು. ದಂಪತಿ ತಮ್ಮ ಮೊಬೈಲ್ ಫೋನ್ ಕೂಡ ನೀಡದೇ, ತಮ್ಮ ನಿವಾಸವನ್ನು ಪರಿಶೀಲನೆ ಮಾಡಲು ಬಿಡದೆ ಪೊಲೀಸರ ತನಿಖೆಗೆ ಅಸಹಕಾರ ನೀಡಿದರು ಎಂದು ತಿಳಿದು ತಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!