New Delhi

ಟಿಆರ್‌ಪಿ ಹಗರಣ; ಪೊಲೀಸರ ಸಮನ್ಸ್ ರದ್ದತಿ ಕೋರಿದ್ದ ರಿಪಬ್ಲಿಕ್‌ ಟಿವಿ ಅರ್ಜಿ ವಜಾ

ನವದೆಹಲಿ, ಅ 15- ಟಿಆರ್‌ಪಿ ವಿವಾದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಜಾರಿಗೊಳಿಸಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿ ರಿಪಬ್ಲಿಕ್‌ ಟಿವಿ ವಾಹಿನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.

ಅರ್ಜಿದಾರರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ‌ ನೇತೃತ್ವದ ನ್ಯಾಯಪೀಠ, ನಮಗೆ ಹೈಕೋರ್ಟ್‌ ಮೇಲೆ ನಂಬಿಕೆಯಿರಬೇಕು. ನ್ಯಾಯಾಂಗ ವ್ಯಾಪ್ತಿಯನ್ನು ಮೀರುವುದು ತಪ್ಪು ಸಂದೇಶ ನೀಡುತ್ತದೆ ಎಂದಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಹರೀಶ್ ಸಾಲ್ವೆ ಅವರಿಗೆ ನ್ಯಾಯಪೀಠ, ಸಂವಿಧಾನದ 226 ನೇ ವಿಧಿ ಅನ್ವಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿತು.

ಆದರೆ, ಮುಂಬೈ ಪೊಲೀಸ್‌ ಆಯುಕ್ತರು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುವುದರ ಕುರಿತು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಹೆಚ್ಚು ಮತ್ತು ದುಬಾರಿ ಜಾಹೀರಾತುಗಳನ್ನು ಆಕರ್ಷಿಸಲು ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳನ್ನು (ಟಿಆರ್‌ಪಿ) ಕುಶಲತೆಯಿಂದ ಹೆಚ್ಚಿಸಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ವಿರುದ್ಧ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!