Belagavi

ಕುಸಿದಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆ ಬಾಗವಾನ ವಶಕ್ಕೆ

ಬೆಳಗಾವಿ, ೧೫- ಒಂದು ಕಾಲಕ್ಕೆ ಬೈಲಹೊಂಗಲ, ಬೆಳಗಾವಿ, ಖಾನಾಪುರ ತಾಲೂಕಿನ ರೈತರ ಜೀವನಾಡಿಯಾಗಿದ್ದ ಬೈಲಹೊಂಗಲ ಉಪವಿಭಾಗದ ರಾಜಕೀಯ ಕೇಂದ್ರವಾಗಿದ್ದ ಮತ್ತು ರಾಜಕೀಯ ಕಾರಣಗಳಿಗಾಗಿ ಆರ್ಥಿಕವಾಗಿ ನೆಲಕಚ್ಚಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುಕ್ಕಾಣಿ ಖಾನಾಪೂರದ ನಾಸೀರ ಬಾಗವಾನ ಅವರ ಕೈಗೆ ದೊರೆತಿದೆ.

ನಿನ್ನೆ ಬುಧವಾರ ನಡೆದ ಚುನಾವಣೆಯಲ್ಲಿ ಬಾಗವಾನ ಗುಂಪು ಹದಿನೈದಕ್ಕೆ ಹದಿನೈದೂ ಸ್ಥಾನ ಗೆದ್ದಿದ್ದಾರೆ.

ಒಂದು ಕಾಲಕ್ಕೆ ರಾಜ್ಯದಲ್ಲಿ ರೈತರ ಕಣ್ಮಣಿಯಾಗಿದ್ದ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಬಣದ ವಿರುದ್ಧ ಬಾಗವಾನ ಬಣದ ಸೆಣಸಾಟವಿತ್ತು.

ಡಿ.ಬಿ. ಇನಾಮದಾರ ಅಲ್ಲದೇ ಬಾಬಾಗೌಡ ಪಾಟೀಲ ಕೂಡ ಈ ಕಾರ್ಖಾನೆಯನ್ನಾಳಿದವರೇ. ಆದರೆ ಇಂದು ಕಾಖಾ೯ನೆ ಅವಶೇಷದ ಅಂಚಿಗೆ ಬಂದು ತಲುಪಿದೆ.

ನಿನ್ನೆ ಸಂಜೆ 7 ಗಂಟೆಗೆ ಮತದೆಣಿಕೆ ಆರಂಭವಾಗಿ ಮಧ್ಯರಾತ್ರಿ ನಂತರ ಅಂತ್ಯಗೊಂಡಿತು. ಆರಂಭದಲ್ಲಿ ನಾಸೀರ ಬಾಗವಾನ ಗುಂಪಿನ ಮಹಿಳಾ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಿದರು. ನಂತರ ಅ ವರ್ಗ, ಬ ವರ್ಗ ಮತ್ತು ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳು ಗೆಲವು ತಮ್ಮದಾಗಿಸಿ ನಾಸೀರ್ ಬಾಗವಾನ ಅವರ ಗುಂಪಿಗೆ ೧೦೦% ಜಯ ದೊರಕಿಸಿಕೊಟ್ಟರು.

ನಂತರ ನಡೆದ ಸಾಮಾನ್ಯ ಅಭ್ಯರ್ಥಿಗಳ ಮತ ಎಣಿಕೆಯಲ್ಲಿ ಪ್ರಕಾಶಗೌಡ ಪಾಟೀಲ ಅವರ ಗುಂಪಿನ ಅಭ್ಯರ್ಥಿಗಳು ಪೈಪೋಟಿ ನೀಡಿದರೂ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ.

ಈ ಗೆಲುವು ಬಾಗವಾನ ಅವರ ರಾಜಕೀಯದ ಅಭಿಲಾಷೆಗೆ ಪುನಶ್ಚೇತನ ಒದಗಿಸಿದೆ.
ಚುನಾವಣೆಯಲ್ಲಿ ಒಟ್ಟು 2452 ಮತಗಳಲ್ಲಿ 2049 ಮತಗಳು ಚಲಾವಣೆ ಆಗಿದ್ದವು.

ಗೆಲವು ಸಾಧಿಸಿದ ನಾಸೀರ ಬಾಗವಾನ್ ಅವರ ಗುಂಪಿನ ಅಭ್ಯರ್ಥಿಗಳ ವಿವರ

1) ನಾಸೀರುದ್ದೀನ ಬಾಗವಾನ-ಗಂದಿಗವಾಡ
2) ಅಶೋಕ ಯಮಕನಮರಡಿ -ಗಂದಿಗವಾಡ
3) ಅಶೋಕ ಬೆಂಡಿಗೇರಿ -ಚಿಕ್ಕ ಮುನವಳ್ಳಿ
4) ಮಂಜುನಾಥ ಪಾಟೀಲ- ದಾಸ್ತಿಕೊಪ್ಪ
5) ಲಕ್ಷ್ಮಣ ಎಮ್ಮಿ -ಮಲ್ಲಾಪುರ ಕೆ ಎ
6) ಸಿದ್ದಪ್ಪ ದೊರೆಪ್ಪನವರ-ಹುಲಿಕಟ್ಟಿ
7) ಭರತೇಶ್ ಶೇಬಣ್ಣವರ-ದೇವರಶಿಗಿಹಳ್ಳಿ
8) ಬಸವರಾಜ ಬೆಂಡಿಗೇರಿ-ಎಂಕೆ ಹುಬ್ಬಳ್ಳಿ
9) ಜ್ಯೋತಿಬಾ ಹೈಬತ್ತಿ-ಕಾದರವಳ್ಳಿ
10) ಬಸವರಾಜ ಪುಂಡಿ- ಇಟಗಿ
11) ಶಂಕರಗೌಡ ಪಾಟೀಲ – ಬೈಲೂರು
12) ಸಂಜೀವ್ ಹುಬಳ್ಯೆಪ್ಪನವರ-ಎಂಕೆ ಹುಬ್ಬಳ್ಳಿ
13) ಸಾವಂತ ಕಿರಬನವರ- ತಿಗಡೊಳ್ಳಿ
14) ಮೀನಾಕ್ಷಿ ನೆಲಗಳಿ-ಬೋಗೂರ
15) ಲಕ್ಷ್ಮಿ ಅರಳಿಕಟ್ಟಿ -ಹಿರೇಬಾಗೇವಾಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!