Hyderabad

ಶತಮಾನದ ಮಹಾಮಳೆಗೆ ಹೈದರಾಬಾದ್ ತತ್ತರ; ತೆಲಂಗಾಣದಲ್ಲಿ 30 ಸಾವು,

ಹೈದರಾಬಾದ್, ಅಕ್ಟೋಬರ್ 15 – ಮಳೆ, ಪ್ರವಾಹದ ಅನಾಹುತಗಳಿಗೆ ಸಿಲುಕಿ ತೆಲಂಗಾಣದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ರಾಜಧಾನಿ ಹೈದರಾಬಾದಿನಲ್ಲಿ ಪರಿಸ್ಥಿತಿ ಗಂಭೀರವಾಗಿ ಪರಿಹಾರ ಕಾರ್ಯಗಳಿಗೂ ಅಡಚಣೆಯಾಗುತ್ತಿದೆ. ಶತಮಾನ ಕಾಣದಷ್ಟು ಮಹಾಮಳೆ ಅಕ್ಟೋಬರ್ ನಲ್ಲೇ ಸುರಿದಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೆಲಂಗಾಣದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಜೊತೆ ಮಾತನಾಡಿ, ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ರಸ್ತೆಗಳು ನದಿಯಂತಾಗಿವೆ. ವಾಹನಗಳು ಮುಳುಗಿವೆ, ಮನೆಗಳಿಗೆ ನೀರು ನುಗ್ಗಿ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ .ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಸಹ ನಾಶವಾಗಿದೆ ಇಂದು ಸಹ ಸರ್ಕಾರಿ ಕಚೇರಿಗಳಿಗೆ ರಜೆ ಷೋಷಣೆ ಮಾಡಲಾಗಿದೆ.

ಎಲ್ಲೆಲ್ಲೂ ನೀರು, ಉಕ್ಕಿ ಹರಿಯುತ್ತಿರುವ ನದಿಗಳು ತರಗೆಲೆಗಳಂತೆ ಕೊಚ್ಚಿ ಹೋದ ವಾಹನಗಳು, ಜನರ ಹಾಹಾಕಾರ ಕಂಡುಬಂದಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ತೆಲುಗು ಸೀಮೆಗಳು ದಾಖಲೆ ಮಳೆಗೆ ಸಾಕ್ಷಿಯಾಗಿವೆ.

Leave a Reply

Your email address will not be published. Required fields are marked *

Back to top button
error: Content is protected !!