Bengaluru

ಕ್ಷಿಪಣಿ ಜನಕ ಅಬ್ದುಲ್ ಕಲಾಂ ಜನ್ಮದಿನ: ಗಣ್ಯರಿಂದ ಗೌರವ ನಮನ

ಬೆಂಗಳೂರು, ಅ.15- ಭಾರತರತ್ನ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮದ ದಿನದ ಪ್ರಯುಕ್ತ ಮುಖ್ಯಮಂತ್ರಿ ಸೇರಿ ಅನೇಕ ಗಣ್ಯರು ಕ್ಷಿಪಣಿ ಜನಕನನ್ನು ಸ್ಮರಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಧೀಮಂತ ಸಾಧಕ, ಭಾರತರತ್ನ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ದೇಶಕಾಗಿ ಸದಾ ತುಡಿಯುತ್ತಿದ್ದ ಕಲಾಂ, ಭೇಟಿಯಾದಾಗಲೆಲ್ಲಾ ಅಭಿವೃದ್ಧಿ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ವ್ಯಕ್ತಿತ್ವ, ಸಾಧನೆ, ಪರಿಕಲ್ಪನೆಗಳು ಆದರ್ಶಪ್ರಾಯ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಶೇಷ್ಠ ಕ್ಷಿಪಣಿ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್ ಎಂದೇ ಹೆಸರಾಗಿದ್ದ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.

ಸಚಿವ ಶ್ರೀರಾಮುಲು ಟ್ವೀಟ್ ಮಾಡಿ, ಹೊಸ ಭಾರತದ ಪರಿಕಲ್ಪನೆ ಕಟ್ಟಿಕೊಟ್ಟ ಸರಳ, ಸಜ್ಜನಿಕೆಯ ಮೇಧಾವಿ, ಶಿಕ್ಷಣ ಪ್ರೇಮಿ, ಭಾರತ ರತ್ನ, ಮಿಸೈಲ್ ಮ್ಯಾನ್ ಎಂದೇ ಚಿರಪರಿಚಿತರಾದ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ಶತ ನಮನಗಳನ್ನು ಸಲ್ಲಿಸೋಣ.

ಹಿಂದೂಸ್ಥಾನದ ಹೆಮ್ಮೆಯ ಜ್ಞಾನದ ಸಂತ ಎಂದೆಂದಿಗೂ ಅಜರಾಮರ ಎಂದು ತಿಳಿಸಿದ್ದಾರೆ.

ಸಚಿವ ಸಿ.ಟಿ.ರವಿ, “ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಸೂರ್ಯನಂತೆ ಉರಿಯಬೇಕು” ಎಂಬ ಅವರ ನುಡಿಗಳಂತೆ ಬಾಳಿ ಬದುಕಿದ “ಮಿಸೈಲ್ ಮ್ಯಾನ್”, ಸರಳ ಸಜ್ಜನ, ಭಾರತ ಕಂಡ ಅದ್ಭುತ ವಿಜ್ಞಾನಿ, ದೇಶದ 11ನೆಯ ರಾಷ್ಟ್ರಪತಿ, ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತ ರತ್ನ ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಶತ ಶತ ನಮನಗಳು ಎಂದು ಸ್ಮರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!