Belagavi

ದೇಶದ ಪ್ರಗತಿಗೆ ಭ್ರಷ್ಟಾಚಾರ ಅಡ್ಡಿ

ಬೆಳಗಾವಿ, ಅ.14- ಭ್ರಷ್ಟಾಚಾರ ಕಾಯ್ದೆಯ ಅನುಷ್ಠಾನಗೊಳಿಸುವಲ್ಲಿ ಆಗುವ ತಪ್ಪುಗಳನ್ನು ನ್ಯಾಯಾಲಯವು ಹೊರಡಿಸುವ ತೀರ್ಪುಗಳಲ್ಲಿ ವ್ಯಕ್ತಪಡಿಸುತ್ತಿದ್ದು, ಅವುಗಳನ್ನು ತಿದ್ದುಕೊಂಡಲ್ಲಿ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಆರೋಪಿಗಳಿಗ ಸಜೆಯಾಗುವಂತೆ ನೋಡಿಕೊಳ್ಳಬಹುದೆಂದು ಹಾಗೂ ಭ್ರಷ್ಟರಲ್ಲಿ ಅಂಜಿಕೆ ಹುಟ್ಟಿಸುವಲ್ಲಿ ಯಶಸ್ತಿಯಾಗುವುದು ಎಂದು ಧಾರವಾಡದಲ್ಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನರೇಂದ್ರ ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ದಳ ಉತ್ತರ ವಲಯ, ಬೆಳಗಾವಿ ವತಿಯಿಂದ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಂಚ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ನೇದ್ದಕ್ಕೆ ಸಂಬಂಧಿಸಿದ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಭ್ರಷ್ಟಾಚಾರ ದೇಶದ ಪ್ರಗತಿಗೆ ಹೇಗೆ ಅಡಚಣೆಯಾಗಿದೆ, ಅದನ್ನು ಹೇಗೆ ನಿರ್ಮೂಲನೆ ಮಾಡಬೇಕು ಎನ್ನುವ ಬಗ್ಗೆ ನ್ಯಾಯಮೂರ್ತಿಗಳು ತಿಳಿಸಿಕೊಟ್ಟರು.

ಈ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಲ್ಲಿದ್ದ ಟಿ. ಸುನೀಲಕುಮಾರ, ಐಪಿಎಸ್ ಎಡಿಜಿಪಿ ಎಸಿಬಿ ಕೇಂದ್ರ ಕಛೇರಿ, ಬೆಂಗಳೂರು ಇವರು ಅಧ್ಯಕ್ಷೀಯ ಭಾಷಣ ಮಾಡಿ, ಈ ಮೂರು ದಿವಸದ ಕಾರ್ಯಾಗಾರದಲ್ಲಿ ಉಪನ್ಯಾಸಕರ ಜ್ಞಾನವನ್ನು ಉಪಯೋಗಿಸಿಕೊಂಡು ಅವರು ನೀಡಿದ ಸಲಹೆ ಸೂಚನೆಗಳನ್ನು ಅನುಷ್ಠಾನಗೊಳಿಸಿ ಭ್ರಷ್ಟಾಚಾರ ನಿರ್ಮೂಲನೆ ಪ್ರಕರಣಗಳ ತನಿಖೆ ಕೈಕೊಳ್ಳಲು ಸೂಚಿಸಿದರು.

ಕಾರ್ಯಾಗಾರವನ್ನು ಬಿ.ಎಸ್. ನೇಮಗೌಡರ, ಪೊಲೀಸ್ ಅಧೀಕ್ಷಕರು, ಎಸಿಬಿ ಉತ್ತರ ವಲಯ, ಬೆಳಗಾವಿ ರವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಿದಕ್ಕೆ ಪ್ರಶಂಸಿಸಿದರು.

ಕೊನೆಯ ದಿವಸದ ಕಾರ್ಯಾಗಾರದಲ್ಲಿ ಬಿ.ಎಸ್.ನೇಮಗೌಡ, ಪೊಲೀಸ್ ಅಧೀಕ್ಷಕರು, ಎಸಿಬಿ ಉತ್ತರ ವಲಯ, ಬೆಳಗಾವಿ, ಪ್ರಕಾಶ, ಜೆ.ಎಲ್. ನಿವೃತ್ತ ಪ್ರಾಂಶುಪಾಲರು, ಡಿಟಿಐ ಮೈಸೂರು (ವಿಡಿಯೋ ಕಾನ್ಪರನ್ಸ್ ಮೂಲಕ), ಶ್ರೀಮತಿ ಉಮಾ ಪ್ರಶಾಂತ, ಪೊಲೀಸ್ ಅಧೀಕ್ಷಕರು ಎಸಿಬಿ ಕೇಂದ್ರ ಸ್ಥಾನ, ಬೆಂಗಳೂರು (ವಿಡಿಯೋ ಕಾನ್ಪರನ್ಸ್ ಮೂಲಕ), ಅಭಯ ಪಡಕೆ, ಅಭಯ ಕುಲಕರ್ಣಿ, ಶ್ರೀರಂಗ ಕುಲಕಣಿ ಚಾರ್ಟರ್ಡ ಅಕೌಂಟಂಟ್, ಬೆಳಗಾವಿ ಹಾಗೂ ಶಿವಾನಂದ ಕಲಕೇರಿ, ಐಆರ್‌ಎಸ್ ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ, ಪುಣೆ ರವರು ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಬಗ್ಗೆ, ಕೆ.ಸಿ.ಎಸ್.ಆರ್. ನಿಯಮಗಳ ಬಗ್ಗೆ, ಕೇಂದ್ರ ಕಛೇರಿಯ ಅರ್ಜಿ ವಿಚಾರಣೆಯ ಬಗ್ಗೆ, ಆದಾಯ ತೆರಿಗೆ ಘೋಷಣೆಗಳ ಬಗ್ಗೆ ಉಪನ್ಯಾಸ ನೀಡಿದರು.

ಈ ಕಾರ್ಯಾಗಾರದಲ್ಲಿ ಭ್ರಷ್ಟಾಚಾರ ನಿಗ್ರಹದ ದಳದ ಉತ್ತರ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಈಶಾನ್ಯ ವಲಯ, ಬಳ್ಳಾರಿ ವಲಯದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಹೆಚ್‌ಸಿ/ಪಿಸಿ ದರ್ಜೆಯ ೨೦೦ ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಅಲ್ಲದೇ ಸದರಿ ಕಾರ್ಯಾಗಾರದಲ್ಲಿ ವಿಡಿಯೋ ಕಾನ್ಪರನ್ಸ್ ಮೂಲಕ ಕರ್ನಾಟಕ ರಾಜ್ಯದ ಎಲ್ಲ ಭ್ರಷ್ಟಾಚಾರ ನಿಗ್ರಹದ ದಳ ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!