Athani

ಗಾಳಿಪಟದ ಮಾಂಜಾ ದಾರದಿಂದ ಬೈಕ್ ಸವಾರನ ಕುತ್ತಿಗೆಗೆ ಗಾಯ

ಅಥಣಿ, ೧೪ : ಕೆಲದಿನಗಳ ಹಿಂದೆ ಬೆಳಗಾವಿಯ ಗಾಂಧಿ ನಗರದ ಬಳಿ ಬೈಕ್ ಮೇಲೆ ಹೋಗುತ್ತಿದ್ದ ಯುವಕರೊಬ್ಬರ ಕುತ್ತಿಗೆಗೆ ಮಕ್ಕಳು ಹಾರಿಸುತ್ತಿದ್ದ ಗಾಳಿಪಟದ ಮಾಂಜಾದಾರ ಕುತ್ತಿಗೆಗೆ ಸುತ್ತಿ ಗಾಯಗೊಂಡಿರುವ ಘಟನೆ ನಡೆದಿರುವ ಬೆನ್ನಲ್ಲೇ ಇಂತಹದೊಂದು ಘಟನೆ ಬುಧವಾರ ಅಥಣಿ ಪಟ್ಟಣದಲ್ಲಿ ಸಂಭವಿಸಿದೆ

ಬುರಾನ ಮುಕ್ಬುಲ್ ಜಮಾದಾರ ಎಂಬವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಸಂಕೇಶ್ವರ – ವಿಜಯಪುರ ರಸ್ತೆ ಮಾರ್ಗವಾಗಿ ಬೈಕ್ ಮೇಲೆ ತಮ್ಮ ಮನೆಗೆ ಹೊರಟಿದ್ದರು. ಆಗ ತಂಗಡಿ ಕಾಂಪ್ಲೆಕ್ಸ್ ಮೇಲೆ ಮಕ್ಕಳು ಗಾಳಿಪಟ್ಟ ಹಾರಿಸುತ್ತಿದಾಗ ಗಾಳಿಪಟ ಆಕಸ್ಮಿತವಾಗಿ ಕೆಳಗೆಬಂದು ಇವರ ಕೊರಳಿಗೆ ಗಾಳಿಪಟದ ದಾರ ಸುತ್ತಿಕೊಂಡು, ನಿಯಂತ್ರಣ ಕಳೆದುಕೊಂಡು ಸವಾರರ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ದಾರ ಕುತ್ತಿಗೆಗೆ ಸುಟ್ಟಿಕೊಂಡಿದ್ದರಿಂದ ಅವರಿಗೆ ಗಾಯವಾಗಿದೆ. ಅವರು ಚಿಕಿತ್ಸೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿಯಲ್ಲಿ ಸಂಭವಿಸಿದ ಘಟನೆ ಮರುಕಳಿಸದಿರಲೆಂದು ಬೆಳಗಾವಿ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಗಾಳಿಪಟದ ಮಾಂಜಾದಾರ ಮಾರಾಟ ಹಾಗು ಬಳಕೆ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!