Bengaluru

ದೀಪಾವಳಿ ಪಟಾಕಿ ಮಾರಾಟಕ್ಕೆ ಸರ್ಕಾರದ ಮಾರ್ಗಸೂಚಿ

ಬೆಂಗಳೂರು, ಅ 14- ಕೋವಿಡ್‌ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ನಿಯಂತ್ರಣ ಹೇರಿರುವ ಕೇಂದ್ರ ಸರ್ಕಾರ, ಈಗ ಮುಂಬರುವ ಬೆಳಕಿನ ದೀಪಗಳ ಹಬ್ಬ ದೀಪಾವಳಿಯ ಪಟಾಕಿಗಳ ಮಾರಾಟಕ್ಕೂ ಹಲವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಪಟಾಕಿ ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದಿರಬೇಕು. ನ.1ರಿಂದ 17ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಪರವಾನಗಿಯಲ್ಲಿ ನಮೂದಿಸುವ ಸ್ಥಳದಲ್ಲಿಯೇ ಮಾರಾಟಗಾರರು ಅಂಗಡಿ ಇಡಬೇಕು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆ ಸ್ಥಾಪಿಸಬೇಕು. ಮಳಿಗೆಗಳ ಎರಡೂ ಕಡೆಗಳಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳ ನಡುವೆ 6 ಮೀಟರ್‌ ಅಂತರವಿರಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

ಮಳಿಗೆಗಳ ಸುತ್ತಮುತ್ತ ದಿನನಿತ್ಯದ ಸ್ಯಾನಿಟೈಸ್‌ ಮಾಡಬೇಕು. ಗ್ರಾಹಕರಿಗೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜನದಟ್ಟಣೆ ನಿಯಂತ್ರಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!