New Delhi

ಶಾಲಾ ಶಿಕ್ಷಣ ಸುಧಾರಣೆಗೆ ವಿಶ್ವ ಬ್ಯಾಂಕ್‌ ನೆರವಿನ ಯೋಜನೆಗೆ ಅನುಮೋದನೆ

ನವದೆಹಲಿ, ಅ 14- ಶಾಲಾ ಶಿಕ್ಷಣ ಸುಧಾರಣೆಗೆ ವಿಶ್ವ ಬ್ಯಾಂಕ್‌ನ 5,718 ಕೋಟಿ ರೂ. ನೆರವಿನ ‘ಸ್ಟಾರ್‌’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್, ವಿಶ್ವ ಬ್ಯಾಂಕಿನ 500 ಮಿಲಿಯನ್ ಅಮೆರಿಕ ಡಾಲರ್ (ಅಂದಾಜು 3,700 ಕೋಟಿ ರೂ.) ಆರ್ಥಿಕ ನೆರವಿನೊಂದಿಗೆ ಒಟ್ಟು 5,718 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ರಾಜ್ಯಗಳಿಗೆ ಬಲಪಡಿಸುವ ಬೋಧನೆ-ಕಲಿಕೆ ಮತ್ತು ಫಲಿತಾಂಶಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸ್ಟಾರ್ಸ್‌ ಯೋಜನೆಯನ್ನು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದಡಿ ಹೊಸ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿ ಜಾರಿಯಾಗಲಿದೆ ಎಂದರು.

ಈ ಯೋಜನೆ ಹಿಮಾಚಲಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ಒಡಿಶಾ ಸೇರಿ ಆರು ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಲ್ಲದೆ, ಗುಜರಾತ್, ತಮಿಳುನಾಡು, ಉತ್ತರಾಖಂಡ್, ಜಾರ್ಖಂಡ್ ಮತ್ತು ಅಸ್ಸಾಂ ಎಂಬ ಐದು ರಾಜ್ಯಗಳಲ್ಲಿ ಇದೇ ರೀತಿಯ ಎಡಿಬಿ ಅನುದಾನಿತ ಯೋಜನೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಎಲ್ಲಾ ರಾಜ್ಯಗಳು ತಮ್ಮ ಅನುಭವಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಬೇರೆ ರಾಜ್ಯದೊಂದಿಗೆ ಪಾಲುದಾರರಾಗಿರುತ್ತವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!