New Delhi

ಚಕ್ರ ಬಡ್ಡಿ ಮನ್ನಾ ಜಾರಿಗೊಳಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವಹೆದಲಿ, ಅ 14 – ಚಕ್ರ ಬಡ್ಡಿ ಮನ್ನಾ ಯೋಜನೆಯನ್ನು ಅದಷ್ಟು ಬೇಗ ಜಾರಿ ಗೊಳಿಸಿ ಜನತೆಗೂ ದೀಪಾವಳಿ ಉಡುಗೊರೆ ಕೊಡುವುದು ನಿಮ್ಮ ಕೈಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ.

ಸಾಲ ಮನ್ನಾ ಸಂದರ್ಭದಲ್ಲಿ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನ ಬುಧವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚಕ್ರ ಬಡ್ಡಿ ಮನ್ನಾ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಹೇಳಿ ವಿಚಾರಣೆಯನ್ನ ನವೆಂಬರ್ 2ಕ್ಕೆ ಮುಂದೂಡಿದೆ.

ಆಗಸ್ಟ್ ಅಂತ್ಯದ ವರೆಗೆ 2 ಕೋಟಿ ರೂಪಾಯಿ ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಶನಿವಾರ ತಿಳಿಸಿತ್ತು .

Related Articles

Leave a Reply

Your email address will not be published. Required fields are marked *

Back to top button
error: Content is protected !!