Hyderabad

ನದಿಗಳಾದ ರಸ್ತೆಗಳು, ಕೊಚ್ಚಿ ಹೋದ ವಾಹನಗಳು

ಹೈದರಾಬಾದ್, ಅ 14 – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದೆ.

ಅದರಲ್ಲೂ ತೆಲಂಗಾಣದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಬಹಳ ತತ್ತರಿಸಿದೆ. ಹೈದರಾಬಾದಿನಲ್ಲಿ ಎನ್ ಡಿ ಆರ್ ಎಫ್ ತಂಡಗಳು ರಕ್ಷಣೆ ಧಾವಿಸಿದೆ.

ಕಳೆದ ರಾತ್ರಿ ಹೈದರಾಬಾದಿನ ಶಮ್ಶಾಬಾದ್ ಸಮೀಪದ ಗಗನ್ಪಹಾಡ್ನಲ್ಲಿ ಸತತ ಮಳೆ ಬೆನ್ನಲ್ಲೇ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಎರಡು ತಿಂಗಳ ಮಗು ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿಯಿಂದ ಹೈದರಾಬಾದಿನಲ್ಲಿ ಮಳೆ ಸಂಬಂಧ ಪ್ರಕರಣಗಳಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದಿನ ಪುರಾನಾ ಪುಲ್, ರೆಡ್ಡಿ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ನದಿಯಂತೆ ನೀರು ಹರಿಯುತ್ತಿದೆ. ಹಲವೆಡೆ ನೀರಿನ ಸಮೇತ ವಾಹನಗಳು ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಲುಕಿದ್ದ ಜನರನ್ನ ಪೊಲೀಸರು ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!