New Delhi

ಒಂದೇ ದಿನ 55, 342 ಹೊಸ ಸೋಂಕು ಪ್ರಕರಣ ದಾಖಲು

ನವದೆಹಲಿ, ಅ 13- ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ 55,342 ಪ್ರಕರಣ ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 71,75,881 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ಇಲ್ಲಿ ತಿಳಿಸಿದೆ.

ಒಂದೆರಡು ತಿಂಗಳುಗಳ ನಂತರ, ಪ್ರಕರಣಗಳಲ್ಲಿ ದೈನಂದಿನ ಏರಿಕೆಯಲ್ಲಿ ಇಳಿಮುಖವಾಗಿದೆ. ಅಲ್ಲದೆ ಕಳೆದ 24 ಗಂಟೆಯಲ್ಲಿ 77,760 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 62,27,295 ಕ್ಕೆ ತಲುಪಿದೆ. ಸಾವಿನ ಸಂಖ್ಯೆ ಸಂಖ್ಯೆ 1,09,856 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭಾರತವು 8,38,729 ರಷ್ಟು ಸಕ್ರಿಯ ಪ್ರಕರಣಗಳಿಗೆ ನೆಲೆಯಾಗಿದೆ. ಶೇಕಡಾವಾರು ಪ್ರಕಾರ, ಸಕ್ರಿಯ ಪ್ರಕರಣಗಳು ಶೇಕಡಾ 11.69. ಚೇತರಿಕೆ ಪ್ರಮಾಣವು ಶೇಕಡಾ 86.78 ರಷ್ಟಿದ್ದರೆ, ಸಾವಿನ ಪ್ರಮಾಣವು ಶೇಕಡಾ 1.53 ರಷ್ಟಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 10,73,014 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಸೋಮವಾರದವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 8,89,45,107 ಕ್ಕೆ ತಲುಪಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!