Belagavi

ಬೆಳಗಾವಿಗೆ ಬಂದ ಮೂರು ವಿಮಾನಗಳು ವಾಪಸ್

ಬೆಳಗಾವಿ, ೧೨- ಹವಾಮಾನ ವೈಪರ್ಯತೆಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿಯಲಾಗದೇ ಮೂರು ಪ್ರಯಾಣಿಕರ ವಿಮಾನಗಳು ಸೋಮವಾರ ಹಿಂದಕ್ಕೆ ಮರುಳಿವೆ.

ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ಭಾರಿ ಮಳೆ ಮತ್ತು ದಟ್ಟವಾದ ಮೋಡಕವಿದ ವಾತಾವರಣವಿದ್ದದರಿಂದ ವಿಮಾನವಿಳಿಸಲು ರನ್ವೇ ಕಾಣದೆ ಸ್ವಲ್ಪ ಹೊತ್ತು ಆಕಾಶದಲ್ಲೇ ಹಾರಾಡಿದ ವಿಮಾನಗಳು ನಂತರ ಮರಳಿ ಹೋಗಿವೆ.

ಹೈದರಾಬಾದ್ ನಿಂದ ಬಂದಿದ್ದ ವಿಮಾನ ಮಾತ್ರ ಹುಬ್ಬಳ್ಳಿಗೆ ಹೋಗಿ ಇಳಿದಿವೆ. ತಿರುಪತಿ ಮತ್ತು ಬೆಂಗಳೂರು ವಿಮಾನಗಳು ಬಂದಿದ್ದ ಸ್ಥಳಕ್ಕೆ ಹಿಂದಿರುಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಕೂಡ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗಾಗಿ ಮಂಗಳವಾರವೂ ವಿಮಾನ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!