Bengaluru

ಆರ್ಥಿಕ ಸಂಕಷ್ಟಲ್ಲಿ ಕರುನಾಡು : ರಾಜ್ಯ ಸರ್ಕಾರ ಆರ್ ಬಿಐ ಮೂಲಕ ಮಾಡಿದ ಸಾಲ 31,000 ಕೋಟಿ ರೂ..?

ಬೆಂಗಳೂರು,ಅ 12- ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಅಭಿವೃದ್ಧಿ ಕೆಲಸಕ್ಕೆ ಖರ್ಚು ಮಾಡಲು ಸರ್ಕಾರದ ಬಳಿ ಬಿಡಿಗಾಸೂ ಇಲ್ಲದಂತಾಗಿದೆ.ಅನಿವಾರ್ಯ ವಾಗಿ ಸರ್ಕಾರ ಸಾಲದ ಮೊರೆ ಹೋಗಲು ನಿರ್ಧರಿಸಿದೆ.ಈವರೆಗೆ ರಾಜ್ಯ ಸರ್ಕಾರ ಮಾಡಿರುವ ಸಾಲ ಬರೋಬ್ಬ ರು 31 ಸಾವಿರ ಕೋಟಿ ರೂ ಎಂದರೆ ನಂಬುತ್ತೀರಾ..?

ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಕೇಂದ್ರ ಸರ್ಕಾರಿ ಜಾರಿಗೆ ತಂಡ ಲಾಕ್‌ಡೌನ್ ನಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿವು ಬಹುತೇಕ ಋಣಾತ್ಮಕ ಹಂತಕ್ಕೆ ತಲು ಪಿತ್ತು.ಆದಾಯ ಮೂಲ ಗಳೆಲ್ಲ ಬರಿದಾಗಿದ್ದು,ಬೊಕ್ಕಸ ಖಾಲಿ ಖಾಲಿಯಾಯಿತು.ಅನಿವಾರ್ಯತೆ ಸ್ಥಿತಿಯಲ್ಲಿ ಸರ್ಕಾರ ಬರೋಬ್ಬರಿ 33 ಸಾವಿರ ಕೋಟಿ ರು.ಹೆಚ್ಚುವರಿ ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಲು ನಿರ್ಧರಿಸಿದೆ.ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರೂ.ಗಾತ್ರದ ಆಯವ್ಯಯವನ್ನು ಮಂಡಿಸಿದ್ದು 1,79,920 ಕೋಟಿ ರೂ.ಆದಾಯ ನಿರೀಕ್ಷೆ ಮಾಡಲಾಗಿತ್ತು.ಆದರೆ,ಕೊರೊನಾ ಲಾಕ್ಡೌನ್‌ನಿಂದಾಗಿ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರೂ.ಗೆ ಕುಸಿಯುವ ಸಾಧ್ಯತೆ ಇದೆ.

ಇದರಿಂದ ಸರ್ಕಾರಕ್ಕೆ 65,920 ಕೋಟಿ ರು.ಹಣದ ಕೊರತೆ ಎದುರಾಗಲಿದೆ.ಕೊರೊನಾ ಸಂಕಷ್ಟದಿಂದಾಗಿ ಕೇಂ ದ್ರ ಸರ್ಕಾರವು ಜಿಡಿಪಿ ಮೇಲೆ ಶೇ.3 ರಿಂದ 5ರವರೆಗೆ ಸಾಲ ಪಡೆಯಲು ಅವಕಾಶ ನೀಡಿದೆ.ಇದರಿಂದ 36,700 ಕೋಟಿ ರೂ.ಹೆಚ್ಚುವರಿ ಸಾಲ ಪಡೆಯಲು ಸರ್ಕಾರಕ್ಕೆ ಅವಕಾಶ ಇದ್ದು,ಸದ್ಯ 33,000 ಕೋಟಿ ರೂ.ಸಾಲ ಪಡೆಯಲು ಅಧಿವೇಶನದಲ್ಲೂ ವಿಧೇಯಕಕ್ಕೆ ಸರ್ಕಾರ ಅನುಮೋದನೆ ಪಡೆದಿದೆ.

ರಾಜ್ಯ ಸರ್ಕಾರ ಈ ಬಾರಿ ಸಾಲವನ್ನೇ ಬಹುವಾಗಿ ನೆಚ್ಚಿಕೊಂಡಿದೆ.ಅಭಿವೃದ್ಧಿ ಕೆಲಸ ಹಾಗೂ ಸರ್ಕಾರಿ ನೌಕರರ ವೇತನಕ್ಕಾಗಿ ಸಾಲಮಾಡದೆ ಅನ್ಯದಾರಿ ಇಲ್ಲದಂತಾಗಿದೆ.

ಆರ್ ಬಿಐ ಅಂಕಿ ಅಂಶದ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಜುಲೈ ವರೆಗೆ 12,000 ಕೋಟಿ ರೂ.ಸಾಲ ಪಡೆದಿದೆ.ನಬಾರ್ಡ್ ನಿಂದ ರಾಜ್ಯ ಸರ್ಕಾರ 52.29 ಕೋಟಿ ರೂ.‌ಸಾಲ ಪಡೆಯಲಾಗಿದೆ. ರಾಜ್ಯ ಸರ್ಕಾರ ಆರ್ ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್)ವನ್ನು ಎತ್ತುವಳಿ ಮಾಡುತ್ತಿದೆ.

ಆಗಸ್ಟ್ ತಿಂಗಳಲ್ಲಿ ಸರ್ಕಾರ 7,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.ಆಗಸ್ಟ್ 25, ಆಗಸ್ಟ್ 18 ಹಾಗೂ ಆಗ ಸ್ಟ್ 11 ಕ್ಕೆ ತಲಾ 2,000 ಕೋಟಿ ರೂ. ಎಸ್ ಡಿಎಲ್ ನ್ನು ಎತ್ತುವಳಿ ಮಾಡಿದ್ದರೆ, ಆಗಸ್ಟ್ 04 ರಂದು ರಾಜ್ಯ ಸರ್ಕಾ ರ 1,000 ಕೋಟಿ ರೂ. ಸಾಲ ಪಡೆದಿದೆ.

ಇನ್ನು ಸೆಪ್ಟೆಂಬರ್ ‌ನಲ್ಲಿ ರಾಜ್ಯ ಸರ್ಕಾರ ಒಟ್ಟು 10,000 ಕೋಟಿ ರೂ‌.ಸಾಲ ಎತ್ತುವಳಿ ಮಾಡಿದೆ.ಅದರಂತೆ ಸೆಪ್ಟೆಂಬರ್1,ಸೆ.08, ಸೆ.15, ಸೆ.22 ಹಾಗೂ ಸೆ.29ಕ್ಕೆ ತಲಾ 2,000 ಕೋಟಿ ರೂ.ನಂತೆ ಆರ್ ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲವನ್ನು ಎತ್ತುವಳಿ ಮಾಡಿದೆ.

ಅದೇ ರೀತಿ ಅಕ್ಟೋಬರ್ 6 ರಂದು ಸರ್ಕಾರ 2,000 ಕೋಟಿ ರೂ.ರಾಜ್ಯ ಅಭಿವೃದ್ಧಿ ಸಾಲವನ್ನು ಎತ್ತುವಳಿ ಮಾ ಡಿದೆ.ಉಳಿದಂತೆ ಅಕ್ಟೋಬರ್ ನಲ್ಲಿ ರಾಜ್ಯ ಸರ್ಕಾರ ಇನ್ನೂ6,000 ಕೋಟಿ ರೂ.ಸಾಲವನ್ನು ಪಡೆಯಲು ಯೋ ಜಿಸಿದೆ.ಆ ಮೂಲಕ ಅಕ್ಟೋಬರ್ ನಲ್ಲಿ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.

ಇನ್ನು ನವಂಬರ್ ನಲ್ಲಿ ರಾಜ್ಯ ಸರ್ಕಾರ 8,000 ಕೋಟ ರೂ.ಸಾಲ ಎತ್ತುವಳಿ ಮಾಡಲು ನಿರ್ಧರಿಸಿದ್ದರೆ,ಡಿಸೆಂ ಬರ್ ನಲ್ಲಿ ಒಟ್ಟು10,000 ಕೋಟಿ ರೂ‌.ಸಾಲ ಪಡೆಯಲು ನಿರ್ಧರಿಸಿದೆ.ಹೀಗೆ ಒಟ್ಟಾರೆ ಜುಲೈ ತಿಂಗಳಿನಿಂದ ಡಿಸೆಂಬರ್ ವರೆಗೆ 31 ಸಾವಿರ ಕೋಟಿ ರೂ ಆದಾಯವಿಲ್ಲದೆ ಬರೀ ಸಾಲ ಪಡೆದು ಸರ್ಕಾರ ಆಡಳಿತ ನಡೆಸುತ್ತಿದೆ.

ಜಿಎಸ್‌ಟಿ ಪರಿಹಾರ 11,324 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಮರುಪಾವತಿ ಭರವಸೆಯೊಂದಿಗೆ ಸಾಲ ಮಾಡಲು ಅವಕಾಶ ನೀಡಲಾಗಿದೆ.ಇವುಗಳೆಲ್ಲದರ ಪರಿಣಾಮ ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರು.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ.ಇಷ್ಟಾದರೂ ಒಟ್ಟು ಜಿಡಿಪಿ ಉತ್ಪನ್ನದ ಶೇ.23.2 ರಷ್ಟು ಮಾತ್ರ ಸಾಲ ಆಗಲಿದೆ.ಶೇ.25ಕ್ಕಿಂತ ಹೆಚ್ಚಿರಬಾರದು ಎಂಬ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮ ಗಳ ಅಡಿಯೇ ಇರಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!