New Delhi

ಹತ್ರಾಸ್‌ ಪ್ರಕರಣ; ಸರ್ಕಾರದ ನಡವಳಿಗೆ ಅನೈತಿಕ, ಅಮಾನವೀಯ- ರಾಹುಲ್‌ ಗಾಂಧಿ

ನವದೆಹಲಿ, ಅ 12- ಉತ್ತರಪ್ರದೇಶದ ಹತ್ರಾಸ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್‌ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ರಾಜ್ಯ ಸರ್ಕಾರದ ವರ್ತನೆ ಅನೈತಿಕ ಮತ್ತು ಅಮಾನವೀಯ ಎಂದಿದ್ದಾರೆ.

ಮಹಿಳಾ ಸುರಕ್ಷತೆ ಕುರಿತ ಡಿಜಿಟಲ್‌ ಅಭಿಯಾನದ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದಲು, ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ನಾನು ಹತ್ರಾಸ್ ಗ್ಯಾಂಗ್ರೇಪ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದಾಗ ಇದು ನನಗೆ ಸ್ಪಷ್ಟವಾಗಿದೆ’ ಎಂದಿದ್ದಾರೆ.

ಸರ್ಕಾರದ ಕೆಲಸ ಆರೋಪಿಗಳನ್ನು ಮತ್ತು ಅಪರಾಧಿಗಳನ್ನು ರಕ್ಷಿಸುವುದಲ್ಲ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವುದು ಅವರ ಕೆಲಸ. ಹತ್ರಾಸ್ ಘಟನೆಯಲ್ಲಿ ರಾಜ್ಯ ಸರ್ಕಾರದ ವರ್ತನೆ ಅಮಾನವೀಯ ಮತ್ತು ಅನೈತಿಕವಾಗಿದೆ. ”

ಮಹಿಳೆಯರ ಮೇಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತೆ ಸಾರ್ವಜನಿಕರಿಗೆ ಕರೆ ನೀಡಿದ ರಾಹುಲ್ ಗಾಂಧಿ, ” ದೇಶಾದ್ಯಂತ ಮಹಿಳೆಯರ ಮೇಲಿನ ಅನ್ಯಾಯಗಳ ವಿರುದ್ಧ ಧ್ವನಿ ಎತ್ತೋಣ. ಇದು ಬದಲಾವಣೆಯತ್ತ ಒಂದು ಹೆಜ್ಜೆಯಾಗಿರುತ್ತದೆ” ಎಂದಿದ್ದಾರೆ.
ಯುಎನ್ಐ ಎಸ್ಎಚ್ 1849

Related Articles

Leave a Reply

Your email address will not be published. Required fields are marked *

Back to top button
error: Content is protected !!