Bengaluru

ವರಿಷ್ಠರನ್ನು ಭೇಟಿ ಮಾಡಿ ದೂರು ನೀಡಲಿರುವ ಶ್ರೀರಾಮುಲು

ಬೆಂಗಳೂರು,ಅ.12- ಹೇಳದೇ ಕೇಳದೇ ಏಕಾಏಕಿ ಆರೋಗ್ಯ ಖಾತೆಯಿಂದ ತಮ್ಮನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಬಿಜೆಪಿ ವರಿಷ್ಠರಿಗೆ ದೂರು ಕೊಡಲು ನಿರ್ಧರಿಸಿದ್ದಾರೆ.

ಮಂತ್ರಿಸ್ಥಾನ ನನಗೆ ಸಾಕಾಗಿ ಹೋಗಿದೆ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿರುವ ತೋಡಿಕೊಂಡಿರುವ ಶ್ರೀರಾಮುಲು ನನಗೇ ಯಾವುದೇ ಸಚಿವ ಹುದ್ದೆ ಬೇಡ.ಸಂಪುಟದಿಂದ ಹೊರಗೆ ಬರಲು ಸಜ್ಜಾಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ದೇವನಹಳ್ಳಿಯ ಚಿಕ್ಕಜಾಲ ಬಳಿ ಇರುವ ತಮ್ಮ ಆಪ್ತರ ಜತೆ ಸಮಾಲೋಚನೆ ನಡೆಸಿದ ಶ್ರೀರಾಮುಲು, ವರಿಷ್ಠರನ್ನು ಭೇಟಿ ಮಾಡಿದ ಬಳಿಕ ತಮ್ಮ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಸಂಪುಟದಿಂದ ಹೊರಬರುವ ಸಂಬಂಧ ಹಾಗೂ ಸುಧಾಕರ್‌ಗೆ ಆರೋಗ್ಯ ಖಾತೆ ಕೊಟ್ಟಿರುವ ಬಗ್ಗೆ ಶೀಘ್ರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲು ಶ್ರೀರಾಮುಲು ನಿರ್ಧರಿಸಿದ್ದಾರೆನ್ನಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಸುಧಾಕರ್ ಪದೇ ಪದೇ ಹಸ್ತಕ್ಷೇಪದಿಂದ ತಮಗೆ ತೊಂದರೆಯುಂಟಾಗಿದೆ. ಈಗ ಏಕಾಏಕಿ ಖಾತೆಯನ್ನು ಬದಲಾಯಿಸಲಾಗಿದೆ. ತಮಗೆ ಸಚಿವ ಸ್ಥಾನ ಬೇಡ. ಬದಲಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಹೇಳಲಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!