Sports

ಮುಯ್ಯಿ ತೀರಿಸುವ ವಿಶ್ವಾಸದಲ್ಲಿ ಧೋನಿ ಬಳಗ

ದುಬೈ, ಅ. 12-
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 13ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮಂಗಳವಾರ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

ತಲಾ ಏಳು ಪಂದ್ಯಗಳನ್ನಾಡಿರುವ ಇತ್ತಂಡಗಳು ಮೂರು ಜಯ, ನಾಲ್ಕು ಸೋಲುಗಳೊಂದಿಗೆ ತಲಾ 6 ಅಂಕ ಹೊಂದಿವೆ. ಟೂರ್ನಿಯ ಮೊದಲ ಹಂತ ಮುಕ್ತಾಯಗೊಂಡು ಎರಡನೇ ಹಂತದ ಆರಂಭಕ್ಕೆ ಹೈದರಾಬಾದ್ ಮತ್ತು ಚೆನ್ನೈ ವೇದಿಕೆಯಾಗಿವೆ. ಅಕ್ಟೋಬರ್ 2ರಂದು ದುಬೈ ಅಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಹೈದರಾಬಾದ್ ವಿರುದ್ಧ 7 ರನ್ ಗಳ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ , ಇದೀಗ ಅದೇ ಮೈದಾನದಲ್ಲಿ ಹಿಂದಿನ ಸೋಲಿಗೆ ತಿರುಗೇಟು ನೀಡುವ ಹಂಬಲದಲ್ಲಿದೆ. ಆದರೆ ಮತ್ತೊಂದು ಜಯದ ನಿರೀಕ್ಷೆಯಲ್ಲಿ ಹೈದರಾಬಾದ್ ಎದುರು ನೋಡುತ್ತಿದೆ.

ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪರಾಭವಗೊಂಡಿರುವುದು ಧೋನಿ ಬಳಗದ ಅಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧವು ಹೈದರಾಬಾದ್ ಸೋಲು ಕಂಡಿದೆ. ಹೀಗಾಗಿ ಜಯದ ಹಳಿಗೆ ಮರಳಲು ಮಂಗಳವಾರದ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಟೂರ್ನಿಯಲ್ಲಿ ಉಭಯ ತಂಡಗಳು 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ ತಂಡ 9ರಲ್ಲಿ ಗೆಲುವು ಸಾಧಿಸಿದರೆ, 4ರಲ್ಲಿ ಹೈದರಾಬಾದ್ ಜಯ ಸಾಧಿಸಿದೆ.

500 ರನ್ ಸನಿಹದಲ್ಲಿ ವಾರ್ನರ್
ಐಪಿಎಲ್ ನಲ್ಲಿ 133 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 5000 ರನ್ ಪೂರೈಸಲು ಕೇವಲ 19 ರನ್ ಗಳಿಸಬೇಕಿದೆ. ಜತೆಗೆ ಕೊಹ್ಲಿ, ರೈನಾ ಮತ್ತು ರೋಹಿತ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಹಾಗೂ ಮೊದಲ ವಿದೇಶಿ ಆಟಗಾರ ಎಂಬ ಶ್ರೇಯಕ್ಕೆ ವಾರ್ನರ್ ಪಾತ್ರರಾಗಲಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಸಂಭಾವ್ಯ ತಂಡಗಳು

ಹೈದರಾಬಾದ್
ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ ಸ್ಟೋವ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಪ್ರಿಯಗ್ ಗರ್ಗ್, ಅಭಿಷೇಕ್ ಶರ್ಮ, ರಶೀದ್ ಖಾನ್, ಸಂದೀಪ್ ಶರ್ಮ, ಖಲೀಲ್ ಅಹ್ಮದ್, ಟಿ. ನಟರಾಜನ್, ಅಬ್ದುಲ್, ಸಮದ್, ಮೊಹಮ್ಮದ್ ನಬಿ.

ಚೆನ್ನೈ
ಮಹೇಂದ್ರ ಸಿಂಗ್ ಧೋನಿ (ನಾಯಕ), ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎನ್. ಜಗದೀಶನ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕರಣ್ ಶರ್ಮ, ಕೇದಾರ್ ಜಾಧವ್, ಹ್ಯಾಜೆಲ್ ವುಡ್.

Related Articles

Leave a Reply

Your email address will not be published. Required fields are marked *

Back to top button
error: Content is protected !!