Bengaluru

ಸಚಿವ ಶ್ರೀ ರಾಮುಲುಗೆ ಶಾಕ್ ನೀಡಿದ ಮುಖ್ಯಮಂತ್ರಿ : ಖಾತೆ ಮರು ಹಂಚಿಕೆ

ಬೆಂಗಳೂರು,ಅ 12- ಆರೋಗ್ಯ ಇಲಾಖೆ ಖಾತೆಯನ್ನು ಕೊನೆಗೂ ಸಚಿವ ಡಾ.ಸುಧಾಕರ್ ಗೆ ಹಾಗೂ ಆರೋಗ್ಯ ಇಲಾಖೆ ಬದಲಾಗಿ ಸಚಿವ ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಿ ರಾಜ್ಯಪಾಲರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅಧಿಕೃತ ಆದೇಶದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯನ್ನು,ಸಚಿವ ಶ್ರೀರಾಮುಲುಗೆ ಸಮಾ ಜ ಕಲ್ಯಾಣ ಇಲಾಖೆಯನ್ನು ನೀಡಿದ್ದಾರೆ.ಡಿಸಿಎಂ ಗೋವಿಂದ ಕಾರಜೋಳಅವರಿಗೆ ಹಾಲಿ ಲೋಕೋಪಯೋಗಿ ಇಲಾಖೆಯಲ್ಲಿ ಮುಂದುವರೆಯಲಿದ್ದಾರೆ.ವಿಪರ್ಯಾಸವೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿಯೂ ಸಚಿವ ರಾಮುಲುಗೆ ಹಿಂದೆ ನೀಡಲಾಗಿ ತ್ತು.ಈಗ ರಾಮುಲು ಅವರಿಂದ ಹಿಂದುಳಿವ ವರ್ಗಗಳ ಕಲ್ಯಾಣ ಇಲಾಖೆಯನ್ನು ಮುಖ್ಯಮಂತ್ರಿ ಯಡಿಯೂರ ಪ್ಪ ವಹಿಸಿಕೊಂಡು ಕೇವಲ ಸಮಾಜ ಕಲ್ಯಾಣ ಇಲಾಖೆಯನ್ನು ನೀಡುವ ಮೂಲಕ ರಾಮುಲುಗೆ ಮತ್ತೊಂದು ಹೊಡೆತ ನೀಡಿದ್ದಾರೆ.

ಡಾ.ಸುಧಾಕರ್ ಗೆ ಡಬಲ್ ಧಮಾಕ,ರಾಮುಲುಗೆ ಶಾಕ್ ಮೇಲೆ ಶಾಕ್ ನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.ವೈದ್ಯಕೀಯ ಶಿಕ್ಷಣದ ಜೊತೆಗೆ ಕುಟುಂಬ ಕಲ್ಯಾಣವನ್ನು ಹೆಚ್ಚುವರಿಯಾಗಿ ನೀಡಿದರೆ .ರಾಮುಲುಗೆ ಎರಡು ಖಾತೆಗಳನ್ನು ತೆಗದು ಒಂದೇ ಖಾತೆಗೆ ಸೀಮಿತಗೊಳಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ರಾಮುಲು ಮತ್ತಷ್ಟು ಸಿಡಿದೇಳುವಂತೆ ಮಾಡಿದ್ದಾರೆ.ಇದರಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಹಾಗೂ ಆಪರೇಷನ್ ಕಮಲಕ್ಕೆ ಬಳಗಾದ ಶಾಸಕರ ಲಾಭಿಯೂ ಅಡಗಿದೆ ಎನ್ನಲಾಗಿದೆ.

ನಿನ್ನೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಕೋವಿಡ್ ಉಸ್ತುವಾರಿಗಳ ಸಭೆಯ ಬಳಿಯ ತೀರ್ಮಾನ ಕೈಗೊಂಡಿ ದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ನಿರ್ವಹಣೆಯಲ್ಲಿ ಸಚಿವ ಶ್ರೀರಾಮುಲು ಮತ್ತು ಸಚಿವ ಸುಧಾ ಕರ್ ನಡುವೆ ಹೊಂದಾಣಿಕೆಯಾಗದೆ ಗೊಂದಲವೇರ್ಪಟ್ಟಿದೆ.ಇಲಾಕೆಯ ನಿರ್ವಹಣೆಯಲ್ಲಿ ಸಚಿವ ಸುಧಾಕರ್ ಹಸ್ತಕ್ಷೇಪ ಪಡೆಸಿದ್ದಾರೆಂದು ಪದೇ ಪದೇ ಶ್ರೀರಾಮುಲು ಮುಖ್ಯಮಂತ್ರಿಯವರ ಬಳಿ ಅಳಲು ತೋಡಿಕೊಂಡಿ ದ್ದರು.

ಕೋವಿಡ್ ನಿರ್ವಹಣೆಯಲ್ಲಿ ರಾಮುಲು ವಿಫಲರಾಗಿದ್ದು,ಇಲಾಖೆಯಲ್ಲಿ ಔಷಧಿ,ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪವೂ ಕೇಳಿ ಬಂದಿತ್ತುವಿಧಾನ ಮಂಡಲ ಅಧಿವೇಶನದಲ್ಲಿ ವಿಪಕ್ಷಗಳ ಆರೋಪಕ್ಕೆ ಸಚಿವ ಸುಧಾಕರ್ ಸಮರ್ಥವಾಗಿ ಉತ್ತರ ನೀಡುವ ಮೂಲಕ ಅವರ ಬಾಯಿ ಮುಚ್ಚಿಸಿದರು.ಆದರೆ ವಿಧಾನ ಪರಿಷತ್ ನಲ್ಲಿ ಸಚಿವ ರಾಮುಲು ಸಮರ್ಥವಾಗಿ ಉತ್ತರ ನೀಡಲಾಗದೆ ಪಲಾಯನ ಗೈದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ನಡುವೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದ್ದಿದ್ದಕ್ಕೆ ಆರಂಭದಿಂದಲೂ ಮುನಿಸಿಕೊಂಡಿದ್ದ ಸಚಿವ ರಾಮುಲು ಡಿಸಿಎಂ ಸ್ಥಾನ ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಿದ್ದರು.ಆದರೆ ಸಚಿವ ರಮೇಶ್ ಜಾರಕಿಹೊಳಿ ಅಡ್ಡ ಗಾಲು ಹಾಕುವ ಮೂಲಕ ರಾಮುಲುಗೆ ಡಿಸಿಎಂ ತಪ್ಪಿಸಿ ತಾವು ಡಿಸಿಎಂ ಆಗಬೇ ಕೆಂದು ನಿರಂತರ ಪ್ರಯತ್ನ ನಡೆಸಿದ್ದಾರೆ.ಹೀಗಾಗಿ ಮುಖ್ಯಮಂತ್ರಿಗಳು ಮೂಲ ನಿವಾಸಿಗಳಿಗಿಂತ ವಲಸಗರಿಗೆ ಆದ್ಯತೆ ನೀಡುತ್ತಿರುವುದು ಮೊದಲಿಂದಲೂ ಸಿಟ್ಟಿತ್ತು.ಈಗ ತಮ್ಮ ಜೊತೆ ಚೆರ್ಚಿಸಿದೆ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟ ಸಂಚಲನ ಸೃಷ್ಟಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!