Haveri

ಕುಡಿಯುವ ನೀರಿನ ದುರ್ಗಾದೇವಿ ಕೆರೆ ಯೋಜನೆ ಯಶಸ್ವಿ: ಬಿ.ಸಿ.ಪಾಟೀಲ

ಹಾವೇರಿ, ಅ.12 – ಹಿರೆಕೆರೂರಿಗೆ ಕುಡಿಯುವ ನೀರನ್ನು ಪೂರೈಸುವ ದುರ್ಗಾದೇವಿ ಕೆರೆ ಯೋಜನೆ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಬಿ.ಟಿ.ಪಾಟೀಲ ತಿಳಿಸಿದ್ದಾರೆ.

2018 ರಲ್ಲಿ ಆರಂಭಗೊಂಡಿದ್ದ ದುರ್ಗಾದೇವಿ ಕೆರೆ ಯೋಜನೆಗೆ 2017 ರಲ್ಲಿ ಸುಮಾರು 24 ಕೋಟಿ.ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 2018ರಲ್ಲಿ ಕಾಮಗಾರಿ ಆರಂಭವಾಗಿತ್ತು.
ದುರ್ಗಾ ದೇವಿಯ ಕೆರೆಯ ಪಾದ ಸ್ಪರ್ಶಿಸಿ ಡೆಲಿವರಿ ಪಾಯಿಂಟ್‌ ತಲುಪಿರುವ ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಯೋಗಿಕ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪದ ಹತ್ತಿರ ಕುಮಧ್ವತಿ ನದಿಯಿಂದ ನೀರನ್ನು ಎತ್ತಿ ಹಿರೆಕೆರೂರಿನ ದುರ್ಗಾದೇವಿ ಕೆರೆಗೆ ನೀರನ್ನು ಹರಿಸುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ದೂದಿಹಳ್ಳಿ ಗ್ರಾಮದ ಸುಮಾರು ಆರು ಕೆರೆಗಳು ಗುಂಡಗಟ್ಟಿ ಗ್ರಾಮದ ಕೊಪ್ಪದ ಕೆರೆ, ಹಿರೆಕೆರೂರಿನ ದುರ್ಗಾದೇವಿ ಕೆರೆಗೆ ನೀರು ಹಾಯಿಸಿ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.ಅಲ್ಲದೇ ಕೊಳವೆಬಾವಿ ಪುನಶ್ಚೇತನಗೊಳ್ಳುವ ಮೂಲಕ ಅಂತರ್ಜಲ ಹೆಚ್ಚಿ ಸುತ್ತಮುತ್ತಲ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!