Belagavi

ಚಿತ್ರಸಾಹಿತಿ ಕಲ್ಯಾಣ ಕುಟುಂಬ ವಂಚಿಸಿದ್ದ ‘ಮಾಂತ್ರಿಕ’ ಸಂಪಾದಿಸಿದ್ದು ಕೋಟ್ಯಾಂತರ!!!

ಬೆಳಗಾವಿ, ೧೨- ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ಕೆ ಕಲ್ಯಾಣ ಕುಟುಂಬದ ಪ್ರಕರಣದ ಮೂಲಕ ಬೆಳಕಿಗೆ ಬಂದ ಬಾಗಲಕೋಟ ಮೂಲದ ಶಿವಾನಂದ ವಾಲಿ ಎಂಬವ ಮಾಟ ಮಂತ್ರ ಮಾಡಿಯೇ 5 ರಿಂದ 6 ಕೋಟಿ ರೂಪಾಯಿ ಸಂಪಾದಿಸಿರುವದು ಪೋಲೀಸರ ತನಿಖೆಯಿಂದ ಗೊತ್ತಾಗಿದೆ.

ಕಲ್ಯಾಣ ಕುಟುಂಬದ ವಿಷಯದಲ್ಲಿ ವಿಚಾರಣೆಗಾಗಿ ತಮ್ಮ ವಶದಲ್ಲಿರುವ ವಾಲಿ ನೀಡಿರುವ ಮಾಹಿತಿಯನ್ನು ಸೋಮವಾರ ಸುದ್ಫಿಗೋಷ್ಠಿಯಲ್ಲಿ ತಿಳಿಸಿದ ಕಾನೂನು ಸುವ್ಯವಸ್ಥೆಯ ಡಿಸಿಪಿ ವಿಕ್ರಮ್ ಆಮಟೆ, ವಾಲಿ ಕಲ್ಯಾಣ ಕುಟುಂಬಕ್ಕೆ ತಾನು ವಂಚಿಸಿ ಸುಮಾರು 5 ರಿಂದ 6 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಬಂಗಾರ ವಾಹನ, ಸ್ಥಿರಾಸ್ತಿ ಪಡೆದಿರುವದಾಗಿ ಒಪ್ಪಿಕೊಂಡಿದ್ದಾನೆ.

ತನಿಖೆ ನಡೆಸುತ್ತಿರುವ ಮಾಳಮಾರುತಿ ಪೊಲೀಸರು ವಾಲಿಯಿಂದ 9 ಮ್ಯಾಕ್ ಸಿಕ್ಯಾಬ್, 350 ಗ್ರಾಂ ಚಿನ್ನ, 6 ಕೆ.ಜಿ. ಬೆಳ್ಳಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ ನಗರ ಸೇರಿದಂತೆ ಐದರಿಂದ ಆರು ಕೋಟಿ ರೂಪಾಯಿ ಆಸ್ತಿ ಶಿವಾನಂದ ವಾಲಿ ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಬಹಳಷ್ಟು ಭಾಗ ಕಲ್ಯಾಣ್ ಕುಟುಂಬಕ್ಕೆ ಸೇರಿದೆಂದು ಅವರು ತಿಳಿಸಿದರು.

ಪ್ರೇಮಕವಿ, ಸಾಹಿತಿ ಕೆ.ಕಲ್ಯಾಣ ದಾಂಪತ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆಯಲ್ಲಿ ಚಿಟಿಂಗ್ ಮತ್ತು ಅಪಹರಣ ದೂರು ದಾಖಲಿಸಿದ ಪರಿಣಾಮ ಗಡ್ಡೇಕರ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿ ಕಲ್ಯಾಣ ಅವರ ಪತ್ನಿ ಹಾಗೂ ಅವರ ಕುಟುಂಬದವರನ್ನು
ರಕ್ಷಿಸಿದ್ದಾರೆ.

ಗಂಗಾ ಕುಲಕರ್ಣಿ ಎಂಬ ಮಹಿಳೆಯನ್ನು ವಾಲಿ ಶ್ರೀಮಂತರ ಅದರಲ್ಲೂ ಮಹಿಳಾ ಆಸ್ತಿಕರ ಮನೆಗಳಿಗೆ ಅಡುಗೆ ಅಥವಾ ಇನ್ನಾವುದೋ ಕೆಲಸಕೆಂದು ಕಳುಹಿಸಿ ಅವರ ಪತಿಯಿಂದಲೇ ಅವರ ಪತ್ನಿಗೆ ಕಂಟಕ ಇದೆ. ಇದನ್ನು ತಪ್ಪಿಸಬೇಕೆಂದರೆ ಪೂಜೆ, ಮಾಟ ಮಂತ್ರ ಮಾಡಿಸಬೇಕೆಂದು ಹೇಳಿಸಿ ಅವರು ತನ್ನನ್ನು ಸಂಪರ್ಕಿಸುವಂತೆ ಮಾಡುತ್ತಿದ್ದ, ನಂತರ ಇನ್ನಷ್ಟು ಹೆದರಿಸಿ ಲಕ್ಷಾಂತರ ಹಣ ಪಡೆದುಕೊಳ್ಳುತ್ತಿದ್ದ. ಕಲ್ಯಾಣ ಕುಟುಂಬದೊಂದಿಗೆ ಆದದ್ದೂ ಇದೆ ಎಂದು ಅವರು ತಿಳಿಸಿದರು.

ತನ್ನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿಕೊಳುತ್ತಿದ್ದ, ಅವನನ್ನು ನಂಬಿದ ಅನೇಕ ಕುಟುಂಬಗಳು ತಮ್ಮ ಸ್ಥಿರಾಸ್ತಿಯನ್ನೂ ಅವನ ಹೆಸರಿಗೆ ವರ್ಗಾಯಿಸಿವೆ. ವಾಲಿ ಕುರಿತು ತನಿಖೆ ಇನ್ನೂ ನಡೆದಿದೆಯೆಂದು ಅವರು ತಿಳಿಸಿದರು.

ಸಾರ್ವಜನಿಕರು ಮಾಟ ಮಂತ್ರ ಎಂದು ಅನುಮಾನ ಬಂದರೆ ಇಂಥ ವ್ಯಕಿಗಳ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು. ತನಿಖಾಧಿಕಾರಿ ಸಿಪಿಐ ಬಿ.ಆರ್.ಗಡ್ಡೇಕರ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!