Belagavi

ಹುಕ್ಕೇರಿಯಲ್ಲಿ ಭಾರೀ ಮಳೆ; ರಸ್ತೆ ಮೇಲಿನ ನೀರಿನ ಸೆಳುವಿಗೆ ಕೊಚ್ಚಿಹೋದ ವೃದ್ಧ, ಕಾರು

 

ಹುಕ್ಕೇರಿ, ೧೧- ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಅವ್ಯಾಹಿತವಾಗಿ ಮಳೆಸುರಿದು ಪಟ್ಟಣದ ರಸ್ತೆಗಳಲ್ಲಿ ೩-೪ ಅಡಿಗಳಷ್ಟು ಎತ್ತರಕ್ಕೆ ನೀರು ಹರಿಯಿತು. ನೀರಿನ ರಭಸಕ್ಕೆ ಪಟ್ಟಣದ ಮುಖ್ಯ ವ್ಯವಹಾರದ ರಸ್ತೆಯೊಂದರಲ್ಲಿ ವೃದ್ಧರೊಬ್ಬರು ಕೊಚ್ಚಿ ಹೋಗಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ್ದ ಒಂದು ಮಾರುತಿ ಸ್ವಿಫ್ಟ್ ಕಾರ್ ಸೇರಿ ಅನೇಕ ದ್ವಿಚಕ್ರ ವಾಹನಗಳು ತೇಲಿಕೊಂಡು ಹೋಗಿವೆ.

ಸುಮಾರು ಆರು ದಶಕದಿಂದ ಇಂತಹ ಮಳೆಯನ್ನೇ ತಾವು ಕಂಡಿಲ್ಲವೆಂದು ಅನೇಕ ವೃದ್ಧರು ಹೇಳಿದ್ದಾರೆ.

ಬರಗಾಲದ ಪ್ರದೇಶವೆಂದೇ ಗುರುತಿಸಲ್ಪಟ್ಟಿರುವ ಹುಕ್ಕೇರಿ ಪಟ್ಟಣ ಈಗ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು ಹಾಳಾಗಿವೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!