Belagavi

ಪ್ರತಿಭಟನೆಗೆ ಸಮಾಧಿ ತೋಡಿ ಅದರಲ್ಲಿ ಕುಳಿತುಕೊಂಡಿದ್ದ ರೈತನಿಗೆ ಜೆಡಿಎಸ್ ಪರಿಹಾರ

 

ಬೆಳಗಾವಿ : ತಾವು ಸರಬರಾಜು ಮಾಡಿದ್ದ ಕಬ್ಬಿಗೆ ಸಕ್ಕರೆ ಕಾರ್ಖಾನೆ ಬಿಲ್ ಕೊಡುವದನ್ನು ವಿಳಂಭಮಾಡಿದ್ದನು ಖಂಡಿಸಿ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡು ಅದರಲ್ಲಿ ಕುಳಿತು ಪ್ರತಿಭಟಿಸಿದ್ದ ರೈತ ಶಿವಪ್ಪ ನವರ ಮನೆಗೆ ಜಿಲ್ಲಾ ಜೆಡಿಎಸ್ ಭೆಟ್ಟಿನೀಡಿ 10000 ರೂಪಾಯಿ ಪರಿಹಾರ ನೀಡಿದ್ದಾರೆ.

ಜೆಡಿಎಸ್  ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ನಾಶೀರ್ ಬಾಗವಾನ್ ನೇತೃತ್ವದಲ್ಲಿ ಶಿವಪ್ಪ ಅವರ ಮನೆಗೆ ಭೆಟ್ಟಿ ನೀಡಿ ವೈಯುಕ್ತಿಕ ಪರಿಹಾರ ನೀಡಿ, ಸಾಂತ್ವನ ಹೇಳಿದರು. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಲು ವಿನಂತಿಸಿಕೊಂಡರು.
ಕಬ್ಬು ಪೂರೈಸಿದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಕ್ರಮವನ್ನು ಖಂಡಿಸಿದರು.

ರೈತ ಶಿವಪ್ಪ ಅವರಿಗೆ ಕಾರ್ಖಾನೆ 85, 000 ರೂಪಾಯಿ ಬಿಲ್ ನೀಡಬೇಕಿದೆ. ಸೂಕ್ತ ಸಮಯದಲ್ಲಿ ಬಿಲ್ ದೊರೆಯದ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅವರು ಎರಡು ದಿನಗಳ ಹಿಂದೆ ನೆಲದಲ್ಲಿ ಸಮಾಧಿ ಥರ ತೆಗ್ಗು ತೋಡಿ ಅದರಲ್ಲಿ ಕುಳಿತು ಪ್ರತಿಭಟಿಸಿ ಗಮನ ಸೆಳೆದಿದ್ದರು.

ರೈತ ಶಿವಪ್ಪ ಸೇರಿ ಕಾರ್ಖಾನೆ ಎಲ್ಲ ರೈತರ ಬಿಲ್ ಶೀಘ್ರ ಪಾವತಿಸುವಂತೆ ಜೆಡಿಎಸ್ ಹೋರಾಟ ಮಾಡಲಿದೆಯೆಂದು ಭಾಗವಾನ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!