New Delhi

ಯೋಗಿ ಆದಿತ್ಯನಾಥ್ ಗೆ ಭೀಮ್ ಆರ್ಮಿ ಮುಖ್ಯಸ್ಥ ಆಜಾದ ಸವಾಲು

ನವದೆಹಲಿ, ಅ 10- ಹಾಥರಸ್ ಘಟನೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲಿ ಜಾತಿ ಹಿಂಸೆಗಳನ್ನು ಭುಗಿಲೆಬ್ಬಿಸಲು ಕೆಲ ಗುಂಪುಗಳು ಭಾರಿ ಪ್ರಮಾಣದ ಹಣ ಪಡೆದುಕೊಂಡಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಕ್ಕೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ ತಿರುಗೇಟು ನೀಡಿದ್ದಾರೆ.

ಈ ಆರೋಪ ಸಂಬಂಧ ಯಾವುದೇ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಆದಿತ್ಯ ನಾಥ್ ಗೆ ಸವಾಲು ಎಸೆದಿದ್ದಾರೆ. ತಮ್ಮ ಬಳಿ ಒಂದು ಲಕ್ಷ ರೂಪಾಯಿ ಹಣ ಇರುವುದನ್ನು ತನಿಖಾ ಸಂಸ್ಥೆಗಳು ದೃಢಪಡಿಸಿದರೆ, ತಾವು ರಾಜಕಾರಣ ತ್ಯಜಿಸುವುದಾಗಿ, ಇಲ್ಲವಾದರೆ ಸುಳ್ಳು ಹೇಳುವ ಮುಖ್ಯಮಂತ್ರಿ ಯೋಗಿ ರಾಜೀನಾಮೆ ನೀಡುವರೆ? ಎಂದು ಪ್ರಶ್ನಿಸಿದ್ದಾರೆ.

ಚಂದ್ರಶೇಖರ ಆಜಾದ ಈ ಸವಾಲನ್ನು ಟ್ವೀಟ್ ಮೂಲಕ ಹಾಕಿದ್ದಾರೆ. ತಾವು ಜೀವನವನ್ನು ತಮ್ಮ ಸಮುದಾಯಕ್ಕೆ ಸಮರ್ಪಿಸಿಕೊಂಡಿದ್ದು, ಸಮುದಾಯ ನನ್ನ ವೆಚ್ಚಗಳನ್ನು ಭರಿಸುತ್ತಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಯಾವುದೇ ತನಿಖೆ ನಡೆಸಲಿ, ನೂರು ಕೋಟಿ ರೂಪಾಯಿ ಕತೆ ಬಿಡಿ… ನನ್ನ ಬಳಿ ಗರಿಷ್ಟ 1 ಲಕ್ಷ ರೂಪಾಯಿ ಇರುವುದು ಕಂಡುಬಂದರೆ, ನಾನು ರಾಜಕಾರಣ ತ್ಯಜಿಸುತ್ತೇನೆ, ಇಲ್ಲವಾದರೆ, ನೀವು(ಯೋಗಿ) ನಿಮ್ಮ ಹುದ್ದೆಗೆ ರಾಜೀನಾಮೆ ನೀಡುವಿರಾ? ಎಂದು ಸವಾಲು ಹಾಕಿದ್ದಾರೆ. ತಮ್ಮ ಜೀವನ ಸಮುದಾಯಕ್ಕೆ ಸಮರ್ಪಿಸಿಕೊಂಡಿದ್ದು, ತಮ್ಮ ಎಲ್ಲ ವೆಚ್ಚವನ್ನು ಸಮುದಾಯ ಭರಿಸುತ್ತಿದೆ ಎಂದು ಆಜಾದ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ನೀಡುವ ಒಂದು ಕರೆ ಅಂತರಾಷ್ಟ್ರೀಯ ಷಡ್ಯಂತರಕ್ಕೆ ಹೋಲಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಜಾತಿ ಹಿಂಸಾಚಾರ ಭುಗಿಲೆಬ್ಬಿಸಲು ಕೆಲ ಗುಂಪುಗಳು 100 ಕೋಟಿ ರೂಪಾಯಿ ಹಣ ಪಡೆದುಕೊಂಡಿವೆ ಎಂಬ ಆರೋಪಗಳ ನಂತರ ಚಂದ್ರಶೇಖರ ಹಾಗೂ ಅವರ ಭೀಮ್ ಆರ್ಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈ ನಡುವೆ ಭೀಮ್ ಆರ್ಮಿ ಹಾಗೂ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ನಡುವೆ ಯಾವುದೇ ಸಂಬಂಧ ಇರುವುದು ಪತ್ತೆಯಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

ಚಂದ್ರಶೇಖರ ಹಾಗೂ ಭೀಮ್ ಆರ್ಮಿ ಹಾಥರಸ್ ಘಟನೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಸ್ತಾಪಿಸುತ್ತಿವೆ. ಜಾತಿ ಹಿಂಚಾಚಾರ ಭುಗಿಲೆಬ್ಬಿಸಲು ಅಂತರಾಷ್ಟ್ರೀಯ ಸಂಚು ನಡೆದಿದೆ ಎಂಬ ಆರೋಪ ಮಾಡುವ ಮೂಲಕ ಜನರ ಗಮನ ಬೇರತ್ತ ತಿರುಗಿಸಲು ಯೋಗಿ ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!