Sports

ರಾಹುಲ್ ಬಳಗವನ್ನು ಬೆಂಬಿಡದ ಸೋಲು

ಅಬುಧಾಬಿ, ಅ. 10-
ಆರಂಭಿಕರಾದ ಕೆ.ಎಲ್.ರಾಹುಲ್ (74) ಮತ್ತು ಮಯಾಂಕ್ ಅಗರ್ವಾಲ್ (56) ಅವರ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ 13ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ 2 ರನ್ ಗಳ ವೀರೋಚಿತ ಸೋಲು ಕಂಡು, ಟೂರ್ನಿಯಲ್ಲಿ ಸತತ ಐದನೇ ಸೋಲಿಗೆ ತುತ್ತಾಯಿತು.

ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕೊತಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಬಳಿಕ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತಗೊಂಡಿತು.

ಇದಕ್ಕೂ ಮುನ್ನ ಕೇವಲ 14 ರ್ ಗಳಿಗೆ ರಾಹುಲ್ ಅಜಯ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಅವರ ವಿಕೆಟ್ ಕಳೆದುಕೊಂಡ ಕೋಲ್ಕೊತಾ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ 3ನೇ ವಿಕೆಟ್ ಗೆ ಜತೆಯಾದ ಗಿಲ್ ಮತ್ತು ಇಯಾನ್ ಮಾರ್ಗನ್ (24) ರಕ್ಷಣಾತ್ಮಕ ಬ್ಯಾಟಿಂಗ್ ನಡೆಸಿ 49 ರನ್ ಜತೆಯಾಟ ನಿರ್ವಹಿಸಿ ಬೇರ್ಪಟ್ಟರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರ ಜತೆಗೂಡಿದ ಗಿಲ್ ಅರ್ಧಶತಕ ಪೂರೈಸಿ ಸಂಭ್ರಮಿಸಿದರು. ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕೊನೆಗೂ ಲಯ ಕಂಡುಕೊಂಡರು.

ಗಿಲ್ 47 ಎಸೆತಗಳಲ್ಲಿ 5 ಪೋರ್, ಸಿಕ್ಸರ್ ಸಹಿತ 57 ರನ್ ಕಲೆಹಾಕಿದರೆ, ಕೇವಲ 29 ಎಸೆತಗಳನ್ನೆದುರಿಸಿದ ಕಾರ್ತಿಕ್ , 8 ಫೋರ್, 2 ಸಿಕ್ಸರ್ ಸೇರಿದಂತೆ 58 ರನ್ ಸಿಡಿಸಿ ತಂಡದ ಸವಾಲಿನ ಗುರಿಗೆ ನೆರವಾದರು.ಸಂಕ್ಷಿಪ್ತ ಸ್ಕೋರ್ಕೋಲ್ಕೊತಾ ನೈಟ್ ರೈಡರ್ಸ್: 20 ಓವರ್ ಗಳಲ್ಲಿ 6 ವಿಕೆಟ್ ಗಳಲ್ಲಿ 164 (ಗಿಲ್ 57, ಕಾರ್ತಿಕ್ 58 ; ಬಿಷ್ಣೋಯಿ 25ಕ್ಕೆ1,ಅರ್ಷ್ ದೀಪ್ ಸಿಂಗ್ 25ಕ್ಕೆ 1).
ಕಿಂಗ್ಸ್ ಇಲೆವೆನ್ ಪಂಜಾಬ್:20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 (ಮಯಾಂಕ್ ಅಗರ್ವಾಲ್, 56, ಕೆ.ಎಲ್. ರಾಹುಲ್ 74; ಪ್ರಸಿದ್ಧ್ ಕೃಷ್ಣ 29ಕ್ಕೆ 3).

Related Articles

Leave a Reply

Your email address will not be published. Required fields are marked *

Back to top button
error: Content is protected !!