Bengaluru

ನಕಲಿ ಛಾಪಾ ಕಾಗದ ಮಾರಾಟ: ನಾಲ್ವರ ಬಂಧನ

ಬೆಂಗಳೂರು, ಅ.10- 2002ನೇ ಸಾಲಿನಲ್ಲಿ ನಿಷೇಧಿಸಿದ್ದ ಛಾಪಾ ಕಾಗದವನ್ನು ನಕಲಿಯಾಗಿ‌ ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ವಂಚಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಎಸ್.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಹಸೈನ್ ಮೋದಿ, ಹರೀಶ​, ಶವರ ಅಲಿಯಾಸ್​ ಸೀಮಾ ಹಾಗೂ ನಜ್ಮಾ ಫಾತಿಮಾ ಬಂಧಿತ ಆರೋಪಿಗಳು. ಪ್ರಕರಣದ ಮತ್ತೋರ್ವ ಆರೋಪಿ ‌ತಲೆ‌ಮರೆಸಿಕೊಂಡಿದ್ದಾನೆ.

ಬಂಧಿತರು ಖಾಲಿ ಎ4 ಸೈಜ್ ಪೇಪರ್​​​ಗಳಿಗೆ ವಾಟರ್ ಮಾರ್ಕಿಂಗ್ ಮಾಡಿ ನಕಲಿ ಬಾಂಡ್ ಪೇಪರನ್ನಾಗಿ ಪರಿವರ್ತಿಸುತ್ತಿದ್ದರು. ಬಂಧಿತರಿಂದ 10 ಡಿಟಿಪಿ, ಛಾಪಾ ಕಾಗದ ಇಮೇಜ್ ಸೇವ್ ಮಾಡಿ ಇಟ್ಟಿದ್ದ ಕಂಪ್ಯೂಟರ್, ಪ್ರಿಂಟ್ ತೆಗೆಯಲು ಉಪಯೋಗಿಸುತ್ತಿದ್ದ ಕಲರ್ ಪ್ರಿಂಟರ್ ಹಾಗೂ ಒಟ್ಟು 2, 71 81,000 ಮುಖಬೆಲೆಯ ವಿವಿಧ ನಕಲಿ ಛಾಪಾ ಕಾಗದವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಪಿ ರಸ್ತೆಯಲ್ಲಿರುವ ಅಮರ ರೇಡಿಯೋ ಅಂಗಡಿ ಹತ್ತಿರ ನಿಷೇಧಿತ ಛಾಪಾ ಕಾಗದ ನಕಲಿಯಾಗಿ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!