Bengaluru

ಹಿಂದೆ ಒಕ್ಕಲಿಗರನ್ನು ತೆಗೆದವರೀಗ ಒಕ್ಕಲಿಗರನ್ನು ಗೆಲ್ಲಿಸುತ್ತಿದ್ದಾರೆ : ಕುಮಾರ ಸ್ವಾಮಿ

ಬೆಂಗಳೂರು, ಅ 10- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಿಂದೆ ಒಕ್ಕಲಿಗರನ್ನು ತೆಗೆದವರೀಗ ಒಕ್ಕಲಿಗರನ್ನೇ ಗೆಲ್ಲಿಸಲು ಹೊರಟಿದ್ದಾರೆ. ಯಾರಿಗೆ ಬೇಕಾದರೂ ಟೋಪಿ ಹಾಕುವ ಇವರು ತಮ್ಮ ಅನುಕೂಲಕ್ಕೆ ಜಾತಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಂದಿನ ಮೈತ್ರಿ ಸರ್ಕಾರ ಉಳಿಸಲು ಯಾರು ‘ಬಂಡೆ’ಯಂತೆ ನಿಂತಿದ್ದರೋ ಅವರೀಗ ಜಾತಿರಾಜಕಾರಣ ಆರಂಭಿಸಿದ್ದಾರೆ. ರಾಜಕಾರಣ ಮಾಡಲು ಇನ್ನೂ ಸಮಯವಿದೆ ಎಂದು ಮಹಾಭಾರತದ ಕರ್ಣನ ಕಥಾ ಪ್ರಸಂಗ ಪ್ರಸ್ತಾಪಿಸಿದರು.

ಉಪ ಚುನಾವಣೆ ನಡೆಯುತ್ತಿರುವ ಶಿರಾ, ರಾಜರಾಜೇಶ್ವರಿ ನಗರ ಎರಡನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ಆರ್ ಆರ್ ನಗರದಲ್ಲಿ ಜೆಡಿಎಸ್ ಪಕ್ಷದ ನೆಲೆ ಇದ್ದು, ಪಕ್ಷದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಂತೆ 50-60ಜನ ಉಸ್ತುವಾರಿ ನೇಮಕ ಮಾಡುವುದಿಲ್ಲ‌. ಮುನಿರತ್ನ ಜೆಡಿಎಸ್ ಸೇರ್ಪಡೆಯಾಗುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.

ಮಂಡ್ಯದ ಕಾಂಗ್ರೆಸ್ ರೈತ ಧ್ವನಿ ಸಮಾವೇಶವನ್ನು ಟೀಕಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಹಸಿರು ಹಾಲು ಹಾಕಿಸಿ ಮಂಡ್ಯ ದಲ್ಲಿ ರೈತ ಸಮಾವೇಶ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ದಾಗ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾವ ಕಾಂಗ್ರೆಸ್ ನಾಯಕರೂ ರೈತರ ಕುಟುಂಬಗಳ ಬಳಿ ಹೋಗಲಿಲ್ಲ. ಜೆಡಿಎಸ್ ಪಕ್ಷ ಪರಿಹಾರ ನೀಡಿತ್ತು. ನಮ್ಮದು ರೈತರ ಪರ ಕಾಳಜಿ ಇರುವ ಪಕ್ಷ. ಕಾಂಗ್ರೆಸಿಗರು ಮಂಡ್ಯದಿಂದ ಇಂಡಿಯಾ ಹಿಡಿಯಲು ಹೊರಟಿದ್ದಾರೆ. ಆದರೆ ರೈತರು ದಡ್ಡರಲ್ಲ ಎಂದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!