New Delhi

ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸೂಕ್ತ ಪ್ರಕರಣ ದಾಖಲಿಸಬೇಕು; ಗೃಹ ಸಚಿವಾಲಯ

ದೆಹಲಿ, ಅ 10- ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ನಿರ್ದೇಶನ ನೀಡಿದೆ. ಹಾಥ್ರಸ್ ಅತ್ಯಾಚಾರ ಹಾಗು ಬರ್ಬರ ಹತ್ಯೆಯಿಂದ ದೇಶದೆಲ್ಲೆಡೆ ಆಕ್ರೋಷ ಭುಗಿಲೆದ್ದ ಕಾರಣ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಮೂರು ಪುಟಗಳ ನಿರ್ದೇಶನ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಉತ್ತರಪ್ರದೇಶದ ಹತ್ರಾಸ್‌ ಪ್ರದೇಶದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸೇರಿದಂತೆ ಇತರ ಪ್ರಕರಣಗಳಲ್ಲಿ, ಪೊಲೀಸ್‌ ಇಲಾಖೆ ಸಿಆರ್‌ಪಿಸಿ ಕಾಯ್ದೆಯಡಿ ಸೂಕ್ತ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದೆ.

ಪೊಲೀಸ್ ಠಾಣೆ ವ್ಯಾಪ್ತಿಯ ಹೊರಗಿನ ಪ್ರಕರಣಗಳಾಗಿದ್ದಲ್ಲಿ, ಕೂಡ ಠಾಣಾಧಿಕಾರಿಗಳು ಎಫ್‌ಐಆರ್‌ ಅಥವಾ ಶೂನ್ಯ ಎಫ್‌ಐಆರ್‌ ದಾಖಲಿಸಬಹುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಆದರೆ, ಕಾನೂನಿನಲ್ಲಿ ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಹಲವಾರು ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡಿದ್ದರೂ ಅದನ್ನು ಪಾಲಿಸಲು ಪೊಲೀಸರು ವಿಫಲವಾದರೆ ಮಹಿಳಾ ಸುರಕ್ಷತೆಯ ಖಾತರಿ ನೀಡಲಾಗುವುದಿಲ್ಲ. ಇಂತಹ ಘಟನೆಗಳು ಗಮನಕ್ಕೆ ಬಂದಲ್ಲಿ ಸೂಕ್ತ ತನಿಖೆ ನಡೆಸುವ ಅವಶ್ಯಕತೆಯಿದೆ ಮತ್ತು ಅಕ್ರಮಕ್ಕೆ ಕಾರಣವಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!