Kalaburagi

ವಠಾರ ಶಾಲೆಯ ರೂವಾರಿ ನಳಿನ್ ಅತುಲ್ ಹಠಾತ್ ವರ್ಗಾವಣೆ

ಕಲಬುರಗಿ, ಅ 10- ವಠಾರ ಶಾಲೆಯ ರೂವಾರಿ, ಕಲಬುರಗಿ ವಲಯ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ್ ಅತುಲ್ ಅವರನ್ನು ಏಕಾಏಕೀ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.

ವಿದ್ಯಾಗಮ ಯೋಜನೆಯನ್ನು ರಾಜ್ಯಕ್ಕೆ ಪರಿಚಯಿಸಿದ್ದೆ ಕಲಬುರಗಿ ಜಿಲ್ಲೆ. ನಳಿನ್ ಅತುಲ್ ಅವರು ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ ಬಂದ್ ಇದ್ದಾಗಲೂ ಕಲಬುರಗಿಯಲ್ಲಿ ವಠಾರ ಶಾಲೆ ಮೂಲಕ ಕಲಿಕೆಗೆ ವಿಶೇಷ ಒತ್ತು ನೀಡಿದ್ದರು.

ಸದ್ಯ ಕೊರೊನಾ ವ್ಯಾಪ್ತಿ ತೀವ್ರವಾಗಿ ಪಸರಿಸುತ್ತಿದ್ದು, ವಠಾರ ಶಾಲೆಯ ಮಕ್ಕಳಿಗೂ ವಕ್ಕರಿಸಿದೆ. ಹೀಗಾಗಿ ಸದ್ಯ ವಠಾರ ಶಾಲೆ ತೀವ್ರ ಟೀಕೆಗೆ ಒಳಗಾಗಿದೆ. ಈ ಮಧ್ಯೆ ನಳಿನ್ ಅವರನ್ನು ಒಂದು ವರ್ಷಕ್ಕೆ ಮೊದಲೇ ವರ್ಗಾವಣೆಗೊಳಿಸಲಾಗಿದೆ.

ಅಕ್ಟೋಬರ್ 22, 2019ರಂದು ನಳಿನ್ ಅತುಲ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಸದ್ಯ ನಳಿನ್ ಅವರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!