Belagavi

ಹಿರಿಯ ಕನ್ನಡ ಹೋರಾಟಗಾರ ಶಶಿಧರ ಘಿವಾರಿ ನಿಧನ

 

ಬೆಳಗಾವಿ, ೧೦- ಹಿರಿಯ ಕನ್ನಡ ಹೋರಾಟಗಾರ ಹಾಗು ಪತ್ರಕತ೯
ಶಶಿಧರ ಘಿವಾರಿ ನಿಧನರಾಗಿದ್ದಾರೆ. ಅವರಿಗೆ 60 ವಷ೯ ವಯಸ್ಸಾಗಿತ್ತು.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯೊಂದರಲ್ಲಿ ಶನಿವಾರ ಕೊನೆಯುಸಿರೆಳೆದರು.

ದಶಕದ ಹಿಂದೆ ಸಿರಿಗನ್ನಡ ಪ್ರತಿಷ್ಠಾನ ಅಸ್ತಿತ್ವಕ್ಕೆ ತಂದು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಕನ್ನಡಪರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಅವರು ನಾಡಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಅವರ ಕಾರ್ಯಕ್ರಮಗಳು ಮಾದರಿ ಎನಿಸಿಕೊಂಡಿದ್ದವು.

ಕನ್ನಡಪರ ಹೋರಾಟಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡು ಬಂದಿರುವ ಅವರು ಹಲವಾರು ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ.

ಶಶಿಧರ ಘಿವಾರಿಯವರು ಬೆಂಗಳೂರಿನಂತಹ ಕಾರ್ಯಕ್ರಮಗಳನ್ನು ಬೆಳಗಾವಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಶಶಿಧರ ಅವರು ಎಲ್ ಐ ಸಿ ಏಜೆಂಟ್ ರಾಗಿ ಸಹ ಕೆಲಸ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!