Sports

ಫ್ರೆಂಚ್ ಓಪನ್: ನಡಾಲ್ ಫೈನಲ್ ಗೆ

 

ಪ್ಯಾರೀಸ್, ಅ.9- ಭರ್ಜರಿ ಫಾರ್ಮ್ ನಲ್ಲಿರುವ ಹಾಲಿ ಚಾಂಪಿಯನ್ ಸ್ಪೇನ್ ನ ರಫೇಲ್ ನಡಾಲ್ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ನಡಾಲ್ ಏಕಪಕ್ಷೀಯ ಪಂದ್ಯದಲ್ಲಿ ಜಯ ಸಾಧಿಸಿದರು. ನಡಾಲ್ 6-3, 6-3, 7-6 ರಿಂದ ಅರ್ಜೆಂಟಿನಾದ ಡಿಗೋ ಸ್ವಾರ್ಟ್ಜ್ ಮನ್ ಅವರನ್ನು ಮಣಿಸಿದರು. ಸುಮಾರು ಮೂರು ಗಂಟೆ ಗಳ ಕಾಲ ನಡೆದ ಸೊಗಸಾದ ಪಂದ್ಯದಲ್ಲಿ ನಡಾಲ್ ಅಬ್ಬರಿಸಿದರು.

ಕ್ಲೈ ಕೊರ್ಟ್ ಕಿಂಗ್ ಖ್ಯಾತಿಯ ನಡಾಲ್ 13ನೇ ಬಾರಿ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ನಡಾಲ್ 2005, 2006, 2007, 2008, 2010, 2011, 2012, 2013, 2014, 2017, 2018, 2019 ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!