Bengaluru

ರಾಗಿಣಿ-ಸಂಜನಾಗೆ ಅ.23ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು.ಅ 9- ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿರುವ ಕನ್ನಡ ಚಿತ್ರ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರ ನ್ಯಾಯಾಂಗ ಬಂಧನ ಅವಧಿ ಅ.23ರವರೆಗೆ ವಿಸ್ತರಣೆಯಾಗಿದೆ.

ಇಬ್ಬರು ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಈ ಆದೇಶದೊಂದಿಗೆ ಇಬ್ಬರು ನಟಿಯರು ಅ. 23ರವರೆಗೂ ಪರಪ್ಪನ ಅಗ್ರಹಾರದ ಜೈಲಿನಲ್ಲೇ ಇರಬೇಕಾಗುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಗಲ್ರಾನಿ, ಅಲ್ಲಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ.

ಈ ನಡುವೆ ಅಕ್ಟೋಬರ್ 10 ರಂದು ನಾಳೆ ಸಂಜನಾ ಹುಟ್ಟುಹಬ್ಬವಿದ್ದು, ಈ ಬಾರಿ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಸ್ಥಿತಿ ಎದುರಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!